Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬಯಲು

honey trap
ಬೆಂಗಳೂರು , ಶನಿವಾರ, 1 ಏಪ್ರಿಲ್ 2017 (12:33 IST)
ಬೆಂಗಳೂರಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬಯಲಾಗಿದೆ. ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಪರಿಚಯ ಮಾಡಿಕೊಂಡು ಬಳಿಕ ಹನಿಟ್ರ್ಯಾಪ್ ಮಾಡಿ 10 ಲಕ್ಷ ರೂ. ಹಣ ಮತ್ತು ಒಡವೆ ದೋಚಿದ್ದ 6 ಮಂದಿಯನ್ನ ಬೆಂಗಳೂರಿಮ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿ ಎಂಬ ಮಹಿಳೆ ನಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ನಮ್ಮ ಬ್ಯಾಂಕ್`ನಲ್ಲಿ ಅಕೌಂಟ್ ಮಾಡಿಸಿ ಎಂದು ಕೇಳಿದ್ದಾಳೆ. 15 ದಿನಗಳ ಕಾಲ ಫೋನಿನಲ್ಲಿ ಮಾತುಕತೆ ನಡೆಸಿದ್ದಾಳೆ. ಬಳಿಕ ನಿಮ್ಮನ್ನ ಭೇಟಿಯಾಗಬೇಕೆಂದು ಕರೆದಿದ್ದಾರೆ. ಭೇಟಿ ಬಳಿಕ ಊಟಕ್ಕೆಂದು ಕಾರಿನಲ್ಲಿ ಕೂರಿಸಿಕೊಂಡು ಬಿಡದಿಯ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಹಣ ಮತ್ತು ಒಡವೆ ಕಿತ್ತುಕೊಂಡು 10 ಲಕ್ಷ ಬೇಡಿಕೆ ಇಟ್ಟಿದ್ದಾರೆ. ಗಾಬರಿಗೊಂಡ ಉದ್ಯಮಿ ಹಣ ನೀಡಿದ್ದಾನೆ.

ಪ್ರಕರಣ ಕುರಿತಂತೆ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದು, ಇದೀಗ, ಜ್ಯೋತಿ ಸೇರಿ 6 ಮಂದಿಯನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್, ಮಹೇಶ್, ಮಹಾದೇವಿ, ಜ್ಯೋತಿ, ಬರ್ನು ಅಲಿಯಾಸ್ ಆಶಾ, ಸ್ವಾಮಿ ಬಂಧಿತರು. 

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋಗೆ ಸಡ್ಡು! ಬಿಎಸ್ ಎನ್ಎಲ್ ನಿಂದ ಬಂಪರ್ ಆಫರ್!