Select Your Language

Notifications

webdunia
webdunia
webdunia
webdunia

ಜಿಯೋಗೆ ಸಡ್ಡು! ಬಿಎಸ್ ಎನ್ಎಲ್ ನಿಂದ ಬಂಪರ್ ಆಫರ್!

ಜಿಯೋಗೆ ಸಡ್ಡು! ಬಿಎಸ್ ಎನ್ಎಲ್ ನಿಂದ ಬಂಪರ್ ಆಫರ್!
NewDelhi , ಶನಿವಾರ, 1 ಏಪ್ರಿಲ್ 2017 (12:26 IST)
ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆ ರಿಲಯನ್ಸ್ ವಿರುದ್ಧ ದರ ಸಮರಕ್ಕಿಳಿದಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ.

 

ಕೇವಲ 249 ರೂ. ಮಾಸಿಕ 300 ಜಿಬಿ ಡಾಟಾ ಆಫರ್ ಪ್ರಕಟಿಸಿದೆ. ಈ ಆಫರ್ ಆಕ್ಟಿವೇಟ್ ಮಾಡಿಕೊಂಡವರಿಗೆ ಪ್ರತೀ ಭಾನುವಾರಗಳಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಯಾವುದೇ ನೆಟ್ ವರ್ಕ್ ಗೆ ಉಚಿತ ಕರೆ ಕೂಡಾ ಮಾಡಬಹುದಾಗಿದೆ.

 
‘ಅನ್ ಲಿಮಿಟೆಡ್ ಬ್ರ್ಯಾಂಡ್ ಬ್ಯಾಂಡ್ ಎಟ್ 249’ ಹೆಸರಿನ ಆಫರ್ ಇದಾಗಿದ್ದು, ದಿನಕ್ಕೆ 10 ಜಿಬಿಯವರೆಗೆ ಡಾಟಾ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇಷ್ಟು ಕಡಿಮೆ ದರಕ್ಕೆ ಡಾಟಾ ಆಫರ್ ನೀಡುವ ಸಂಸ್ಥೆ ಇನ್ನೊಂದಿಲ್ಲ ಎಂದು ಬಿಎಸ್ಎನ್ಎಲ್ ಹೇಳಿಕೊಂಡಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಬಿಡಲು ನಟಿ ರಮ್ಯಾಗೆ ಪರೋಕ್ಷ ಸೂಚನೆ?!