Select Your Language

Notifications

webdunia
webdunia
webdunia
webdunia

ಕೋರ್ಟ್ ಗಳೂ ಬಿಜೆಪಿ ಹೇಳಿದಂತೆ ಕೇಳ್ತಿವೆ: ಸಿದ್ದರಾಮಯ್ಯ ಪುತ್ರ ಯತೀಂದ್ರ ವಿವಾದ

Yathindra Siddaramaiah

Krishnaveni K

ಮೈಸೂರು , ಮಂಗಳವಾರ, 12 ನವೆಂಬರ್ 2024 (16:06 IST)
ಮೈಸೂರು: ಇತ್ತೀಚೆಗಿನ ದಿನಗಳಲ್ಲಿ ಕೋರ್ಟ್ ಕೂಡಾ ಬಿಜೆಪಿ ಹೇಳಿದಂತೆ ಕೇಳುವ ಪರಿಸ್ಥಿತಿ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಯತೀಂದ್ರ ಈ ಎಡವಟ್ಟು ಮಾಡಿದ್ದಾರೆ. ಕೋರ್ಟ್ ಗಳು ಬಿಜೆಪಿ ಕೈಗೊಂಬೆಯಾಗಿದೆ ಎನ್ನುವುದು ಒಂದು ರೀತಿಯಲ್ಲಿ ನ್ಯಾಯಾಂಗಕ್ಕೆ ಮಾಡಿದ ಅಪಮಾನವಾಗಿದೆ. ನ್ಯಾಯಾಂಗವನ್ನೇ ಅನುಮಾನಿಸಿದಂತೆ ಆಗುತ್ತದೆ.

ಈ ಹಿನ್ನಲೆಯಲ್ಲಿ ಯತೀಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೋರ್ಟ್ ಗಳೂ ಸಹ ಕೇಂದ್ರದ ಮಾತನ್ನು ಕೇಳುವ ಪರಿಸ್ಥಿತಿ ಬಂದಿದೆ. ನಾವು ತಪ್ಪು ಮಾಡಿಲ್ಲ. ನಮಗೆ ತನಿಖೆಯ ಯಾವುದೇ ಭಯವಿಲ್ಲ. ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಕಾಂಗ್ರೆಸ್ ನಾಯಕ, ಸಚಿವ ಜಮೀರ್ ಅಹ್ಮದ್ ಕೋರ್ಟ್ ತೀರ್ಪನ್ನು ಪೊಲಿಟಿಕಲ್ ತೀರ್ಪು ಎಂದಿದ್ದು ವಿವಾದಕ್ಕೆ ಕಾರಣವಾಯಿತು. ಈ ಸಂಬಂಧ ಜಮೀರ್ ವಿರುದ್ಧ ತನಿಖೆಗೆ ರಾಜ್ಯಪಾಲರು ಸೂಚಿಸಿದ್ದರು. ಇದೀಗ ಕೇಂದ್ರವನ್ನು ಟೀಕಿಸುವ ಭರದಲ್ಲಿ ಕೋರ್ಟ್ ನ್ನೂ ಎಳೆದು ತಂದು ಯತೀಂದ್ರ ವಿವಾದ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿ: ರೌಡಿಶೀಟರ್‌ನ್ನು ಹತ್ಯೆ ಮಾಡಿ ರೈಲ್ವೆ ಹಳಿ ಮೇಲೆ ಎಸೆದ ದುಷ್ಕರ್ಮಿಗಳು