Publish Date: Sat, 15 Feb 2020 (16:25 IST)
Updated Date: Sat, 15 Feb 2020 (16:49 IST)
ವಿಪಕ್ಷ ಹಾಗೂ ಸಿಎಲ್ ಪಿ ಸ್ಥಾನಗಳಿಗೆ ರಾಜೀನಾಮೆ ನೀಡಿರೋ ಸಿದ್ದರಾಮಯ್ಯ ಇದೀಗ ಕೈ ಪಾಳೆಯದ ಹೈಕಮಾಂಡ್ ಗೆ ಖಡಕ್ ಎಚ್ಚರಿಕೆ ಕಳಿಸಿರೋದು ಕುತೂಹಲ ಹುಟ್ಟುಹಾಕಿದೆ.
ಸಿದ್ದರಾಮಯ್ಯನವರ ಆಶಯವನ್ನು ಹೊತ್ತುಕೊಂಡು ಹೈಕಮಾಂಡ್ ಅಂಗಳಕ್ಕೆ ಸಿದ್ದು ಹಾಗೂ ಸೋನಿಯಾ ಗಾಂಧಿ ಆಪ್ತರಾಗಿರೋ ಕೆ.ಜೆ.ಜಾರ್ಜ್ ತಲುಪಿಸಿದ್ದಾರೆ ಎನ್ನಲಾಗ್ತಿದೆ.
ಸಿಎಲ್ ಪಿ ಹಾಗೂ ವಿಪಕ್ಷ ಎರಡೂ ಸ್ಥಾನಗಳಲ್ಲಿ ಮುಂದುವರಿಯಬೇಕು ಅಂತ ಇಚ್ಛೆಪಟ್ಟಿರೋ ಸಿದ್ದರಾಮಯ್ಯಗೆ ಅವರದೇ ಪಕ್ಷದ ಮೂಲ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಯಾವ ನಿಲುವು ತೆಗೆದುಕೊಳ್ಳುತ್ತೆ ಅನ್ನೋದರ ಮೇಲೆ ಸಿದ್ದರಾಮಯ್ಯರ ಮುಂದಿನ ನಡೆ ನಿಂತಿದೆ.