ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ಅಮರೇಗೌಡ ಬಯ್ಯಾಪುರ

ಶುಕ್ರವಾರ, 14 ಫೆಬ್ರವರಿ 2020 (11:12 IST)
ಕೊಪ್ಪಳ : ದೆಹಲಿಯ ಚುನಾವಣೆಯಲ್ಲಿ ಕಾಂಗ್ರೆಸ್  ಶೂನ್ಯ ಸಾಧನೆ ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ  ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.


ಕುಷ್ಟರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂ ಆಪ್ ಪರ ಮಾಡಿದ್ರೆ ನಾವೇನು ಮಾಡೋಕಾಗುತ್ತೆ. ಇವಿಎಂ ಬಗ್ಗೆ ನನಗೆ ಈಗಲೂ ಅನುಮಾನವಿದೆ. ಬೈಎಲೆಕ್ಷನ್ ನಲ್ಲಿ ಅನರ್ಹರು ಗೆದ್ದಿದ್ದೂ ಇವಿಎಂ ನಿಂದಾಗಿಯೇ. ಹೀಗಾಗಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾರು ಅಪಘಾತ ಪ್ರಕರಣ; ಆರೋಪಿಗಳಿಗೆ ಸೂಕ್ತ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ ಡಿಸಿಎಂ