ಬೆಂಗಳೂರು: ಬಿಜೆಪಿಯವರು ಧ್ವೇಷ ಭಾಷಣ ಮಾಡುವವರು. ಅದಕ್ಕೇ ಅವರು ಧ್ವೇಷ ಭಾಷಣ ವಿರೋಧಿ ಖಾಯಿದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಯಾವತ್ತೂ ಧ್ವೇಷಪೂರಿತ ಮತ್ತು ಪ್ರಚೋದನಕಾರೀ ಭಾಷಣಗಳಲ್ಲಿ ತೊಡಗಿಸಿಕೊಂಡಿದೆ. ಅದಕ್ಕೇ ಅವರು ರಾಜ್ಯ ವಿಧಾನಸಭೆ ಅನುಮೋದಿಸಿದ ಧ್ವೇಷ ಭಾಷಣ ವಿರೋಧೀ ಖಾಯಿದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಮಾಜದಲ್ಲಿ ಶಾಂತಿ, ಸಹೋದರತ್ವ ಕಾಪಾಡಿಕೊಂಡು ಬರುವ ಉದ್ದೇಶದಿಂದ ನಮ್ಮ ಸರ್ಕಾರ ಧ್ವೇಷ ಭಾಷಣ ವಿರೋಧೀ ಖಾಯಿದೆ ಜಾರಿಗೆ ತಂದಿದೆ. ಬಿಜೆಪಿಯವರು ಅಂತಹ ಭಾಷಣ ಮಾಡದಿದ್ದರೆ ಹೆದರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಧ್ವೇಷಣ ಭಾಷಣ ಮಾಡದಿದ್ದರೆ ಬಿಜೆಪಿಯವರು ಹೆದರುವುದು ಯಾಕೆ? ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಯಾಕೆ ಹಾಕುತ್ತಾರೆ? ಬಿಜೆಪಿ ಯಾಕೆ ಚಿಂತಿತವಾಗಿದೆ? ಈ ಕಾನೂನು ಎಲ್ಲಾ ಪಕ್ಷದವರಿಗೂ ಅನ್ವಯಿಸುತ್ತದೆ ಎಂದಿದ್ದಾರೆ.