ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟದ ಬಗ್ಗೆ ಸ್ಪಷ್ಟ ಸಂದೇಶ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಎಲ್ಲಾ ರಾಹುಲ್ ಗಾಂಧಿ ತೀರ್ಮಾನ ಮಾಡ್ಬೇಕು ಕಣಯ್ಯಾ ಎಂದಿದ್ದಾರೆ.
ನಿನ್ನೆ ಮಲ್ಲಿಕಾರ್ಜುನ ಖರ್ಗೆ, ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ಯಾವುದೇ ಗೊಂದಲ ಮಾಡಿಲ್ಲ. ಇದೆಲ್ಲಾ ರಾಜ್ಯ ನಾಯಕರೇ ಮಾಡಿಕೊಂಡಿರೋದು. ಅವರೇ ಸರಿಪಡಿಸಿಕೊಳ್ತಾರೆ ಎಂದಿದ್ದರು.
ಖರ್ಗೆ ಹೇಳಿಕೆ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯಗೆ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ರಾಹುಲ್ ಗಾಂಧಿಯವರು ತೀರ್ಮಾನ ಮಾಡಬೇಕು, ಹೈಕಮಾಂಡ್ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡ್ತಾರೆ ಅದಕ್ಕೆ ಬದ್ಧ. ನೋಡಯ್ಯಾ.. ನಾನು ಈಗ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ.
ಅವರು ನಾವು ತೀರ್ಮಾನ ಮಾಡ್ತೀವಿ ಎಂದಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೆ ಅದಕ್ಕೆ ತಕ್ಕಂತೆ ನಡೆದುಕೊಳ್ತೇವೆ. ಇದೆಲ್ಲಾ ಮಾಧ್ಯಮದವರೇ ಚರ್ಚೆ ಮಾಡ್ತಿರೋದು ಎಂದು ರೇಗಿದ್ದಾರೆ.