Select Your Language

Notifications

webdunia
webdunia
webdunia
webdunia

ಗೌರಮ್ಮನಂತಿರುವ ಸಿದ್ದರಾಮಯ್ಯ ಪತ್ನಿ ಮೇಲೆ ಆಪಾದನೆ ಬರದೇ ಇರಲಿ: ಈಶ್ವರಪ್ಪ ಹೀಗೇ ಅಂದಿದ್ಯಾಕೆ

KS Eshwarappa

Sampriya

ಶಿವಮೊಗ್ಗ , ಶನಿವಾರ, 17 ಆಗಸ್ಟ್ 2024 (17:43 IST)
Photo Courtesy X
ಶಿವಮೊಗ್ಗ: ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸುವ ವಿಶ್ವಾಸವಿದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಗೌರವ ಕೊಟ್ಟು ಅವರು ರಾಜೀನಾಮೆ ನೀಡಬೇಕು. ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಟ್ಟಿದ್ದೆನು ಎಂದರು.

ಆದರೆ ಈ ಪ್ರಕರಣ ಸಂಬಂಧ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರನ್ನು ಪ್ರಕರಣದಲ್ಲಿ ಸೇರಿಸಿಬಿಡುತ್ತಾರೋ ಅಂತಾ ಅನುಮಾನವಿದೆ. ಪಾಪ ಅವರು ಗೌರಮ್ಮನ ರೀತಿ‌ ಇದ್ದವರು. ಅವರ ಮೇಲೆ ಅಂತಹ ಆಪಾದನೆ ಬರದೇ ಇರಲಿ ಎಂಬುದಾಗಿ ದೇವರಲ್ಲಿ ಬೇಡಿಕೊಳ್ಳುತ್ತೇನೆ' ಎಂದು ಹೇಳಿದರು‌.

'ಸಿದ್ದರಾಮಯ್ಯ ಕಾನೂನು ಬದ್ದವಾಗಿ ಹೋರಾಟ ಮಾಡಿ ಕ್ಲೀನ್ ಚಿಟ್ ಪಡೆದು ಪ್ರಕರಣದಿಂದ ಯಶಸ್ವಿಯಾಗಿ ಹೊರಗೆ ಬರಲಿ' ಎಂದು ಆಶಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತಾ ವೈದ್ಯೆ ಮರ್ಡರ್ ಕೇಸ್ ಬಗ್ಗೆ ಈ ನಾಲ್ಕು ಸುಳ್ಳುಗಳನ್ನು ನಂಬಬೇಡಿ