Select Your Language

Notifications

webdunia
webdunia
webdunia
webdunia

ಕುರಿ ಯಾವತ್ತೂ ಹೊಲಸು ತಿನ್ನಲ್ಲ, ಹಾಗೇ ಸಿದ್ದರಾಮಯ್ಯ ಕೂಡಾ: ಈಶ್ವರಾನಂದಪುರಿ ಸ್ವಾಮೀಜಿ

siddaramaiah
ಬೆಂಗಳೂರು: ಯಾವ ಅಕ್ರಮವನ್ನು ಮಾಡದ ಸಿದ್ದರಾಮಯ್ಯ ಪರ ನಾವಿದ್ದೇವೆ. ಕುರಿ ಹೊಲಸು ತಿನ್ನಲ್ಲ, ಕುರುಬ ತಪ್ಪುಮಾಡಲ್ಲ. ಬೃಹತ್ ಜನಾಂದೋಲನ ರೂಪಿಸುತ್ತೇವೆ ಎಂದು ಹೊಸದುರ್ಗ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ ಎಂದರು.

ಒಂದು ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಹುನ್ನಾರ ಇದಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಗೌರವ. ಅಷ್ಟಕ್ಕೂ ಅಧಿಕಾರದಲ್ಲಿರುವುದು ಹಿಂದುಳಿದ ವರ್ಗದ ಪ್ರಬಲ ಜನನಾಯಕ ಸಿದ್ದರಾಮಯ್ಯ ಅವರು ದೀನರು, ದುರ್ಬಲರು, ಮಹಿಳೆಯರೂ ಸೇರಿದಂತೆ ಶೋಷಿತರ ಪರವಾಗಿ ಕೆಲಸ ಮಾಡುತ್ತಿರುವ ನಾಯಕ.

ಅವರ ಆಡಳಿತವನ್ನು ಸಹಿಸಕ್ಕಾಗದೆ ಈ ಕುತಂತ್ರದ ಮೂಲಕ ಅವರನ್ನು ಟಾರ್ಗೇಟ್ ಮಾಡಲಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ರಕ್ಷಣೆಗೆ ನಾವೆಲ್ಲಾ ಒಂದಾಗ್ತೇವೆ: ಡಿಕೆ ಶಿವಕುಮಾರ್