Webdunia - Bharat's app for daily news and videos

Install App

ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

Webdunia
ಶನಿವಾರ, 6 ಮೇ 2023 (18:20 IST)
ನಮ್ಮ ಗ್ಯಾರಂಟಿಯನ್ನ ಪ್ರಧಾನಿ ನರೇಂದ್ರ ಮೋದಿಯವರು ಟೀಕೆ ಮಾಡ್ತಾರೆ. ನೀವು ಎಷ್ಟು ಭರವಸೆ ಕೊಟ್ಟಿದ್ರಿ ಅದರಲ್ಲಿ ನೀವೆಷ್ಟು ಈಡೇರಿಸಿದ್ದೀರಿ ಹೇಳಿ ಅಂತಾ ಪ್ರಧಾನಿ ಮೋದಿಯವರನ್ನ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.. ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬಹಿರಂಗ ಚರ್ಚೆಗೆ ಸಿಎಂ ಬಸವರಾಜ ಬೊಮ್ಮಯಿಯನ್ನ ಕರೆದೆ. ಇದಕ್ಕೆ ಬೊಮ್ಮಯಿ ಪ್ರತಿಕ್ರಿಯೆ ಕೊಡಲಿಲ್ಲ.. ಚರ್ಚೆಗೆ ಬರೋಕೆ ಇವ್ರ ಕೈಲಿ ಆಗಲ್ಲ.. ಇವತ್ತಿನವರೆಗೆ ಮೇಕೆದಾಟು ಯೋಜನೆಗೆ ಡಬಲ್ ಇಂಜಿನ್ ಸರ್ಕಾರ ಒಪ್ಪಿಗೆ ಕೊಟ್ಟಿಲ್ಲ.. DPR ಕಳ್ಸಿ ವರ್ಷಗಳೇ ಕಳೆದಿವೆ... ಏನ್ಮಾಡಿದ್ದಾರೆ ಬಿಜೆಪಿಯವ್ರು?.. ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದ್ರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಪಕ್ಷ... ಕೊಟ್ಟ ಭರವಸೆಗಳನ್ನ ಈಡೇರಿಸಿರುವ ಪಕ್ಷ... ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಾಲ 53 ಲಕ್ಷ 11 ಸಾವಿರ ಕೋಟಿ ಇತ್ತು.. ಈಗ ನರೇಂದ್ರ ಮೋದಿ ಮಾಡಿರುವ ಸಾಲ 155 ಲಕ್ಷ ಕೋಟಿ. ದೇಶ ದಿವಾಳಿ ಮಾಡಿರೋರು ಯಾರು ಮಿಸ್ಟರ್ ನರೇಂದ್ರ ಮೋದಿ ಎಂದು ಸಿದ್ದು ಪ್ರಶ್ನಿಸಿದ್ದಾರೆ... ಕರ್ನಾಟಕದಲ್ಲಿ 2 ಲಕ್ಷ 42 ಸಾವಿರ ಕೋಟಿ ಸಾಲವಿದೆ.. ಅದು ಮಾಜಿ ಸಿಎಂ K.C.ರೆಡ್ಡಿಯವರ ಕಾಲದಿಂದ ಬಂದಿರುವ ಸಾಲ. ಈಗ ಬಿಜೆಪಿಯವ್ರೇ ಹೇಳಿರುವ ಪ್ರಕಾರ ಈ ಬಜೆಟ್‌ನಲ್ಲಿ ಲೆಕ್ಕ ಕೊಟ್ಟಿರುವ ಪ್ರಕಾರ 5 ಲಕ್ಷ 64 ಸಾವಿರ ಕೋಟಿ ಸಾಲ ಇದೆ. 5 ವರ್ಷದಲ್ಲಿ 3 ಲಕ್ಷದ 22 ಸಾವಿರ ಕೋಟಿ ಸಾಲವಾಗಿದೆ. ಯಾರು ರಾಜ್ಯವನ್ನ ದಿವಾಳಿ ಮಾಡಿರೋರು‌ ಅಂತಾ ಸಿದ್ದು ಮೋದಿಯನ್ನ ಪ್ರಶ್ನಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments