ಭ್ರಷ್ಟಾಚಾರದ ಆರೋಪ ಇದ್ರೆ ದಾಖಲಾತಿ ಕೊಡಿ ಅಂತ ಸಿಎಂ ಬಸವರಾಜ್ ಬೊಮ್ಮಾಯಿ ಹೇಳ್ತಾರೆ.. ಆದ್ರೆ ರೂಪ್ಸಾ, ಕಂಟ್ರಾಕ್ಟರ್ ಅಸೋಸಿಯೇಷನ್‌ನವ್ರು ಬರೆದಿರುವ ಪತ್ರಗಳು ದಾಖಲೆಗಳಲ್ವಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.. ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, PSI ನೇಮಕಾತಿಯಲ್ಲಾದ ಹಗರಣ ದಾಖಲೆಯಾಗಿಲ್ವಾ? 40 ಪರ್ಸೆಂಟ್ ಕಮಿಷನ್ಗಾಗಿ ಒಬ್ಬ ಆತ್ಮಹತ್ಯೆ ಮಾಡಿಕೊಂಡ್ರು. ಮಾಜಿ ಸಚಿವ K.S. ಈಶ್ವರಪ್ಪ ರಾಜೀನಾಮೆ ಕೊಟ್ರು. ನಾವು ವಿಧಾನಸೌಧದಲ್ಲಿ ಧರಣಿ ಮಾಡಿದ್ವಿ. ಇದು ಎವಿಡೆನ್ಸ್ ಅಲ್ವಾ ಎಂದು ಸಿದ್ದು ಪ್ರಶ್ನಿಸಿದ್ದಾರೆ..
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಪ್ರಶಾಂತ್ ಮಾಡಾಳ್ ಅವರನ್ನು ಪೊಲೀಸ್‌ನವ್ರು ರೆಡ್‌ಹ್ಯಾಂಡಾಗಿ ಹಿಡಿದಿದ್ರು. ಎಂಟು ಕೋಟಿ ಹಣ ಸಿಕ್ತು.. ಇದಕ್ಕಿಂತ ಎವಿಡೆನ್ಸ್ ಇನ್ನೇನು ಬೇಕು ಎಂದು ಸಿದ್ದು ಕುಟುಕಿದ್ದಾರೆ. ಭ್ರಷ್ಟಾಚಾರ ನಡೆಯುತ್ತಿದೆ ಅನ್ನೋದಕ್ಕೆ ಇದಕ್ಕಿಂತ ಹೆಚ್ಚಿನ ಎವಿಡೆನ್ಸ್ ಏನು ಬೇಕು. ಕರ್ನಾಟಕ ಇತಿಹಾಸದಲ್ಲಿ ಇಂತಹ ಭ್ರಷ್ಟಾಚಾರ ನಡೆದಿಲ್ಲ.ಬರೀ ಇಷ್ಟೇ ಅಲ್ಲ ಬೇರೆ-ಬೇರೆ ಕ್ಷೇತ್ರದಲ್ಲೂ ಲಂಚ ನಡೆಯುತ್ತಿದೆ. ವರ್ಗಾವಣೆ ಸೇರಿದಂತೆ ಹಲವು ಕಡೆ ಲಂಚ ನಡೆಯುತ್ತಿದೆ ಎಂದು ಆರೋಪಿಸಿದ್ರು.