Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯಗೆ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಬಿಸಿ, ಇದು ಸಿಎಂ ಸ್ಥಾನದಿಂದ ಕೆಳಗಿಳಿಯುವ ಸುಳಿವು ಎಂದ ಬಿಜೆಪಿ

ಸಿದ್ದರಾಮಯ್ಯಗೆ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಬಿಸಿ, ಇದು ಸಿಎಂ ಸ್ಥಾನದಿಂದ ಕೆಳಗಿಳಿಯುವ ಸುಳಿವು ಎಂದ ಬಿಜೆಪಿ

Sampriya

ಮೈಸೂರು , ಸೋಮವಾರ, 8 ಏಪ್ರಿಲ್ 2024 (14:54 IST)
Photo Courtesy X
ಮೈಸೂರು: ರಾಜ್ಯದಲ್ಲಿ  ದಿನದಿಂದ ದಿನಕ್ಕೆ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ಮತದಾರರನ್ನು ಓಲೈಸಲು ಮಾಸ್ಟರ್‌ ಪ್ಲಾನ್‌ ಮಾಡುತ್ತಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರಿಗೆ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಬಿಸಿ ತಟ್ಟಿದೆ.

ಕಾಂಗ್ರೆಸ್  ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಸುನಿಲ್ ಬೋಸ್ ಪರ ಮತ ಕೇಳಲು​ ಹೋದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಹೋಗಿ ಹೋಗಿ ನಾವು ವೋಟ್​ ಹಾಕಲ್ಲ. ಚುನಾವಣೆ ಬಹಿಷ್ಕರಿಸುತ್ತೇವೆ ಅಷ್ಟೇ ಎಂದು ನೇರ ಸವಾಲು ಹಾಕಿದ್ದಾರೆ.

ಇನ್ನೂ ಸಿಎಂ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಇದೀಗ ಪ್ರಚಾರಕ್ಕೆಂದು ಹೋದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವೆ ಎಂದು ಪಣತೊಟ್ಟಿರುವ ಸಿಎಂ ಸಿದ್ದರಾಮಯ್ಯಗೆ ಇದೀಗ ಭಾರೀ ಮುಖಭಂಗ ಉಂಟಾಗಿದ್ದು, ನಮಗೆ ಚುನಾವಣೆಯೇ ಬೇಡ, ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಅದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಬಹಿಷ್ಕಾರದ ವಿಡಿಯೋ ಹಾಕಿ, ಇದು ಲೋಕಸಭೆ ಚುನಾವಣೆ ನಂತರ  ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆ ನಂತರ ಸಿಎಂ ಖುರ್ಚಿಯಿಂದ ಇಳಿಯುವ ಮುನ್ಸೂಚನೆ ಎಂದು ಲೇವಾಡಿ ಮಾಡಿದ್ದಾರೆ.

ಹಲೋ @siddaramaiah
 ಅವರೇ, ಇದೆಂಥಾ ಸ್ಥಿತಿ ಬಂತು ನಿಮ್ಮ ಪುತ್ರ @Dr_Yathindra_S
 ಅವರಿಗೆ.

ಅಪ್ಪ ಮಾಡಿದ ಸಾಲ ಮಗನ ಹೆಗಲಿಗೆ ಎಂಬಂತೆ ರೈತರ ಬದುಕನ್ನು ಬೀದಿಗೆ ತಂದ ತಪ್ಪಿಗೆ ವರುಣಾ ಕ್ಷೇತ್ರದ ಜನರೇ ಛೀಮಾರಿ ಹಾಕಿ ಯತೀಂದ್ರ ಅವರನ್ನು ಓಡಿಸುತ್ತಿದ್ದಾರೆ.

ಇದು ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ಬಳಿಕ ಕುರ್ಚಿಯಿಂದ ಇಳಿಯುವ ಅಮಾವಾಸ್ಯೆ ಸೂಚನೆ.




 

Share this Story:

Follow Webdunia kannada

ಮುಂದಿನ ಸುದ್ದಿ

ಕಾಡುತ್ತಿರುವ ಬೆನ್ನುನೋವು: ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಬಿಜೆಪಿ ನಾಯಕಿ ಖುಷ್ಬೂ ಸುಂದರ್