ಗೋದ್ರಾ ದುರಂತದಲ್ಲಿ ಸತ್ರು, ಕುಂಬಮೇಳದಲ್ಲಿ ಸತ್ರು ಮೋದಿ ರಾಜೀನಾಮೆ ಕೇಳಿದ್ವಾ: ಸಿದ್ದರಾಮಯ್ಯ

Krishnaveni K
ಮಂಗಳವಾರ, 17 ಜೂನ್ 2025 (14:09 IST)
ಬೆಂಗಳೂರು: ಗೋದ್ರಾ ದುರಂತದಲ್ಲಿ ಹಲವರು ಸತ್ರಲ್ಲ, ಕುಂಬಮೇಳದಲ್ಲಿ ಕಾಲ್ತುಳಿತದಲ್ಲೂ ಸತ್ರಲ್ಲ.. ಆಗೆಲ್ಲಾ ನಾವು ರಾಜೀನಾಮೆ ಕೇಳಿದ್ವಾ? ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಚಿನ್ನಸ್ವಾಮಿ ಮೈದಾನದ ಹೊರಗೆ ನಡೆದ ಪ್ರಕರಣದಲ್ಲಿ 11 ಜನ ಸಾವನ್ನಪ್ಪಿದ್ದಕ್ಕೆ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ ಇಂದು ಸಿಎಂ ಮಾಧ್ಯಮಗಳ ಮುಂದೆ ತಿರುಗೇಟು ನೀಡಿದ್ದಾರೆ.

ಅಲಹಾಬಾದ್ ನಲ್ಲಿ ಒಂದು ಘಟನೆಯಾಯ್ತು, ಗೋದ್ರಾ ದುರಂತದಲ್ಲಿ ಹಲವರು ಸತ್ರು. ಕುಂಬಮೇಳದಲ್ಲಿ ಕಾಲ್ತುಳಿತದಿಂದ ಹಲವರು ಸತ್ರು. ಆಗ ನಾವು ಏನಾರೂ ರಾಜೀನಾಮೆ ಕೇಳಿದ್ವಾ? ಅಥವಾ ಇವರೇನಾದ್ರೂ ಕೇಳಿದ್ರಾ? ಮತ್ತೆ ಈಗ ಯಾವ ನೈತಿಕತೆ ಇಟ್ಟುಕೊಂಡು ನಮ್ಮ ರಾಜೀನಾಮೆ ಕೇಳ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ನೋಡಿ ಇದನ್ನು ನಾವು ಒಂದು ಎಕ್ಸ್ ಕ್ಯೂಸ್ ಎಂದು ಹೇಳುತ್ತಿಲ್ಲ. ಆದರೆ ಅವರ ಕಾಲದಲ್ಲೂ ಹಲವು ದುರಂತಗಳಾಗಿವೆ. ರಾಜೀನಾಮೆ ಕೇಳುವುದಕ್ಕೂ ಒಂದು ಬೆಲೆ ಬೇಡ್ವಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾಗ್ಯವತಿ ಅಗ್ಗಿಮಠ ಸಾವು ಪ್ರಕರಣ: ಕಾಂಗ್ರೆಸ್‌ನ ಆರನೇ ಗ್ಯಾರಂಟಿ ಆತ್ಮಹತ್ಯೆ ಭಾಗ್ಯ

ಬಿಜೆಪಿ ಸರ್ಕಾರದಲ್ಲಿ ದಲಿತರು ಸುರಕ್ಷಿತವಲ್ಲ: ಪ್ರಿಯಾಂಕಾ ಗಾಂಧಿ ಕಿಡಿ

ಕೇರಳ ಶಾಲೆಯಲ್ಲಿ ಹಿಜಾಬ್ ಗದ್ದಲ: ನಿಲುವು ಬದಲಾಯಿಸಿದ ವಿದ್ಯಾರ್ಥಿನಿಯ ಪೋಷಕರು

ಹಮಾಸ್‌ನಲ್ಲಿ ಒತ್ತೆಯಾಳಾಗಿದ್ದ ನೇಪಾಳ ವಿದ್ಯಾರ್ಥಿ ಬಿಪಿನ್ ಸಾವು

ಪ್ರತಿಭೆ ಯಾರ ಸ್ವತ್ತೂ ಅಲ್ಲ ಎನ್ನುವುದಕ್ಕೆ ರಾಮಾಯಣ, ಮಹಾಭಾರತವೇ ಸಾಕ್ಷಿ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments