ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತೀರಾ ಸಾರ್ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರವೇನು ಗೊತ್ತಾ

Krishnaveni K
ಬುಧವಾರ, 10 ಡಿಸೆಂಬರ್ 2025 (13:42 IST)
ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿವಾದ ಮತ್ತೆ ಹೊತ್ತಿಕೊಂಡಿದ್ದು ಐದು ವರ್ಷ ನೀವೇ ಸಿಎಂ ಆಗಿ ಮುಂದುವರಿಯುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಎಂ ಉತ್ತರವೇನು ಗೊತ್ತಾ?

ಮೊನ್ನೆಯಷ್ಟೇ ಸಿಎಂ ಪುತ್ರ ಯತೀಂದ್ರ ನಮ್ಮ ತಂದೆಯವರೇ ಐದು ವರ್ಷ ಸಿಎಂ ಆಗುತ್ತಾರೆ ಎಂದು ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತಮ್ಮ ಪುತ್ರನಿಗೆ ಬುಲಾವ್ ನೀಡಿ ವಾರ್ನಿಂಗ್ ಕೊಟ್ಟಿದ್ದರು.

ಆದರೆ ಯತೀಂದ್ರ ಹೇಳಿಕೆ ಡಿಕೆಶಿ ಬಣದ ಅಸಮಾಧಾನಕ್ಕೆ ಕಾರಣವಾಗಿದೆ. ಇಂದು ಮಾಧ್ಯಮಗಳು ಸಿದ್ದರಾಮಯ್ಯನವರಿಗೆ ನೀವೇ ಐದು ವರ್ಷ ಮುಂದುವರಿಯುತ್ತೀರಾ ಸಾರ್ ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರಿಸಿದ ಅವರು ‘ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಅದೇ ಅಂತಿಮ’ ಎಂದಿದ್ದಾರೆ.

ಇನ್ನು, ಶಾಸಕಾಂಗ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಸುದ್ದಿಯಾಗಿದೆ. ಈ ಬಗ್ಗೆ ಕೇಳಿದ್ದಕ್ಕೆ ಅದರ ಬಗ್ಗೆ ಏನೂ ಚರ್ಚೆಯಾಗಿಲ್ಲ ಎಂದಿದ್ದಾರೆ. ಇನ್ನು ಶಾಸಕಾಂಗ ಸಭೆಯಲ್ಲಿ ನಡೆದ ಎಲ್ಲಾ ವಿಚಾರಗಳನ್ನು ಇಲ್ಲಿ ಹೇಳಕ್ಕಾಗಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಿರಳೆ ಪಾರ್ಟಿಯಿಂದ ಈವತ್ತೂ ಪಾರ್ಲಿಮೆಂಟ್ ಚಲೋ ಮಾಡ್ತೀವಿ: ಅಭಿಜಿತ್ ದಿಪ್ಕೆ

ಪ್ರಿಯಕರನ ಜೊತೆ ಬ್ರೇಕಪ್ ಆದ ಮೇಲೆ 10 ಲಕ್ಷಕ್ಕೆ ಬೇಡಿಕೆಯಿಟ್ಟ ಯುವತಿ: ಕೋರ್ಟ್ ನೀಡಿದ ತೀರ್ಪಿಗೆ ನೆಟ್ಟಿಗರ ಮೆಚ್ಚುಗೆ Video

Karnataka Weather: ಕರ್ನಾಟಕದಲ್ಲಿ ಈ ಜಿಲ್ಲೆಗೆ ಇಂದು ಭಾರೀ ಮಳೆ ಸೂಚನೆ

ರಾಜ್ಯದಲ್ಲಿ ಬರಗಾಲ ತೀವ್ರಗೊಳ್ಳುತ್ತಿದ್ದ ಹಾಗೇ ಸರ್ಕಾರಕ್ಕೆ ಆಗ್ರಹ ಮಾಡಿದ ಯಡಿಯೂರಪ್ಪ

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಲಾಭ, ಇದಕ್ಕೆ ವಿರೋಧ ಸರಿಯಲ್ಲ: ಈಶ್ವರ್ ಖಂಡ್ರೆ

ಮುಂದಿನ ಸುದ್ದಿ
Show comments