Publish Date: Wed, 27 May 2026 (10:10 IST)
Updated Date: Wed, 27 May 2026 (10:12 IST)
ಬೆಂಗಳೂರು: ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೊದಲು ಸಿದ್ದರಾಮಯ್ಯ ಈ ಒಂದು ಮಹತ್ವದ ಕೆಲಸವನ್ನು ಮಾಡಲಿದ್ದಾರೆ. ಅದೇನು? ಇಲ್ಲಿದೆ ನೋಡಿ ವಿವರ.
ರಾಹುಲ್ ಗಾಂಧಿಯಿಂದ ಸೂಚನೆ ಬಂದ ಬಳಿಕ ಸಿದ್ದರಾಮಯ್ಯ ಬೇರೆ ದಾರಿಯಿಲ್ಲದೇ ರಾಜೀನಾಮೆಗೆ ನಿರ್ಧರಿಸಿದ್ದಾರೆ ಎಂಬ ಸುದ್ದಿಯಿದೆ. ಮೂಲಗಳ ಪ್ರಕಾರ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಬಹುತೇಕ ನಿಚ್ಚಳವಾಗಿದೆ. ಆದರೆ ಇದಕ್ಕೆ ಮೊದಲು ಅವರು ಮಹತ್ವದ ಕೆಲಸ ಮಾಡಲಿದ್ದಾರೆ.
ಸಿದ್ದರಾಮಯ್ಯ ಪರವಾಗಿ ಸಾಕಷ್ಟು ಶಾಸಕರು ಇದ್ದಾರೆ. ಈ ಎಲ್ಲಾ ಶಾಸಕರನ್ನು ಸಂಪರ್ಕಿಸದೇ ಅವರು ತಾವಾಗಿಯೇ ಏಕಾಂಗಿಯಾಗಿ ರಾಜೀನಾಮೆ ಬಗ್ಗೆ ನಿರ್ಧರಿಸುವ ಹಾಗಿಲ್ಲ. ಹಾಗೆ ಮಾಡಿದಲ್ಲಿ ಆಪ್ತ ಶಾಸಕರ ಅಸಮಾಧಾನಕ್ಕೆ ಗುರಿಯಾಗಬೇಕಾದೀತು.
ಹೀಗಾಗಿ ರಾಜೀನಾಮೆಗೆ ಮೊದಲು ಅವರು ತಮ್ಮ ಆಪ್ತ ಶಾಸಕರನ್ನು ಉಪಹಾರಕ್ಕೆ ಕರೆದಿದ್ದಾರೆ. ಅವರ ಜೊತೆ ಉಪಹಾರ ಮೀಟಿಂಗ್ ನಡೆಸಿದ ಬಳಿಕ ರಾಜೀನಾಮೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ