Daily Horoscope

Select Your Language

Notifications

webdunia
webdunia
webdunia
webdunia

ಕರ್ನಾಟಕ ಸಿಎಂ ಬದಲಾವಣೆಗೆ ಬಿಗ್ ಟ್ವಿಸ್ಟ್: ರಾಜೀನಾಮೆಗೆ ಸಿದ್ದರಾಮಯ್ಯ ನಿರ್ಧಾರ?

Siddaramaiah
ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಕೇಳಿಬರುತ್ತಿರುವ ವರದಿಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ರಾಜಕೀಯದಲ್ಲಿ ಕ್ಷಣ ಕ್ಷಣಕ್ಕೂ ಮಹತ್ವದ ವಿದ್ಯಮಾನಗಳು ನಡೆಯುತ್ತಿವೆ. ಇಂದು ಬೆಳಿಗ್ಗೆಯಿಂದ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸತತವಾಗಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯಗೆ ರಾಜೀನಾಮೆ ಕೊಡುವಂತೆ ಸ್ವತಃ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರ ಬದಲು ಸಿದ್ದರಾಮಯ್ಯಗೆ ರಾಜ್ಯಸಭೆ ಟಿಕೆಟ್, ಪುತ್ರನಿಗೆ ಮಹತ್ವದ ಹುದ್ದೆಯ ಆಫರ್ ನೀಡಲಾಗಿದೆ.

ಇದೀಗ ರಾಹುಲ್ ಗಾಂಧಿ ಮಾತಿಗೆ ಮಣಿದು ಸಿದ್ದರಾಮಯ್ಯ ರಾಈನಾಮೆಗೆ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ರಾಹುಲ್ ಜೊತೆ ಮಾತುಕತೆ ಬಳಿಕ ಸಿದ್ದರಾಮಯ್ಯ ದೆಹಲಿಯಲ್ಲಿ ತಮ್ಮ ಆಪ್ತರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಹುಲ್ ಹೇಳಿದ ಮೇಲೆ ರಾಜೀನಾಮೆ ಕೊಡದೇ ಇರಲು ಸಾಧ್ಯವಾಗದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಸುದ್ದಿಯಾಗಿದೆ. ಹೀಗಾಗಿ ಈಗ ಕ್ಷಣ ಕ್ಷಣಕ್ಕೂ ಸಿಎಂ ಬದಲಾವಣೆ ವಿಚಾರ ರೋಚಕ ತಿರುವು ಪಡೆಯುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯಕ್ಕೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ: ದೆಹಲಿಗೆ ಸಿದ್ದು, ಡಿಕೆಶಿನ ಕರೆಸಿಕೊಂಡಿದ್ದು ಈ ಕಾರಣಕ್ಕೆ ಅಂತೆ