Daily Horoscope

Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ದೆಹಲಿಯಿಂದ ಬಂದ ತಕ್ಷಣ ಹೀಗೆ ಮಾಡಿದ್ರೆ ಸಿಎಂ ಬದಲಾವಣೆ ಪಕ್ಕಾ ಎಂದರ್ಥ

Siddaramaiah
ಬೆಂಗಳೂರು: ಸಿಎಂ ಕುರ್ಚಿ ಕದನದ ನಡುವೆ ದೆಹಲಿಯಲ್ಲಿ ಇಂದು ಹೈಕಮಾಂಡ್ ನಾಯಕರ ಜೊತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾತುಕತೆ ನಡೆಸಲಿದ್ದಾರೆ. ಈ ಬಗ್ಗೆ ಜನ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದು ಸಿದ್ದರಾಮಯ್ಯ ಹೀಗೆ ಮಾಡಿದ್ರೆ ಸಿಎಂ ಬದಲಾವಣೆ ಪಕ್ಕಾ ಎಂದು ಕಾಲೆಳೆಯುತ್ತಿದ್ದಾರೆ.

ದೆಹಲಿಯಲ್ಲಿ ಇಂದು ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರ ಜೊತೆ ಮಾತುಕತೆ ನಡೆಸಲಿದ್ದಾರೆ. ಈಗ ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಎಲ್ಲರ ಕುತೂಹಲವಿದೆ.

ಈ ನಡುವೆ ಪಬ್ಲಿಕ್ ಸೋಷಿಯಲ್ ಮೀಡಿಯಾಗಳಲ್ಲಿ ಸ್ವಾರಸ್ಯಕರವಾದ ವಾದ ಮುಂದಿಟ್ಟಿದ್ದಾರೆ. ಒಂದು ವೇಳೆ ದೆಹಲಿಯಿಂದ ಬಂದ ತಕ್ಷಣ ಸಿದ್ದರಾಮಯ್ಯ ರಾಜ್ಯಪಾಲರ ಮನೆಗೆ ಹೋದರೆ ಮನೆಗೆ ಹೋಗುತ್ತಾರೆ (ಸಿಎಂ ಬದಲಾವಣೆ ಪಕ್ಕಾ) ಎಂದರ್ಥ. ಒಂದು ವೇಳೆ ತಮ್ಮದೇ ಮನೆಗೆ ಹೋದರೆ ಮನೆಗೆ ಹೋಗಲ್ಲ (ಸಿಎಂ ಬದಲಾವಣೆಯಾಗಲ್ಲ) ಎಂದರ್ಥ ಎಂದು ಕೆಲವರು ಕಾಲೆಳೆದಿದ್ದಾರೆ.

ಇನ್ನು, ಕೆಲವರು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಸೂಚಿಸಿದರೂ ಡಿಕೆ ಶಿವಕುಮಾರ್ ಸಿಎಂ ಆಗುವುದು ಕಷ್ಟ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಪಟ್ಟದಿಂದ ಕೆಳಗಿಳಿಯಬೇಕಾದರೆ ಹೈಕಮಾಂಡ್ ಮುಂದೆ ದೊಡ್ಡ ಡಿಮ್ಯಾಂಡ್ ಇಡಬಹುದು. ಅವರು ಡಿಕೆಶಿ ಹೊರತಾಗಿ ಬೇರೆಯವರನ್ನೇ ಸಿಎಂ ಹುದ್ದೆಗೆ ಸೂಚಿಸಬಹುದು ಎನ್ನುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಸಿಎಂ ಬದಲಾವಣೆ ವಿಚಾರ: ನಂದೇನೂ ಇಲ್ಲ ಎಲ್ಲಾ ರಾಹುಲ್ ಜೀ ಹೇಳ್ತಾರೆ ಎಂದ ಖರ್ಗೆ, ಇಂದು ಕ್ಲೈಮ್ಯಾಕ್ಸ್ ನಿರೀಕ್ಷೆ