Publish Date: Fri, 25 Oct 2019 (11:17 IST)
Updated Date: Fri, 25 Oct 2019 (11:27 IST)
ತುಮಕೂರು : ಸಿದ್ದರಾಮಯ್ಯ ರನ್ನು ಪರಮೋಚ್ಚ ನಾಯಕರು ಎನ್ನುತ್ತಾರೆ . ಅವರಿಗೆ ಮಾನ ಮರ್ಯಾದೆ ಇದ್ಯಾ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಆಗಿ ಸ್ಪೀಕರ್ ಗೌರವಿಸಬೇಕೇಂಬ ಜ್ಞಾನವಿಲ್ಲ. ಸ್ಪೀಕರ್ ವಿರುದ್ಧ ಅವರು ಏಕವಚನದಲ್ಲಿ ಮಾತನಾಡ್ತಾರೆ. ಜಗತ್ತೇ ಮೆಚ್ಚಿಕೊಂಡಿರುವ ಮೋದಿ ನರಹಂತಕ ಎನ್ನುತ್ತಾರೆ. ಇದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನವರ ಸಂಸ್ಕೃತಿ. ನನ್ನದು ಹಿಂದೂ ರಕ್ತ. ಹಿಂದೂಗಳಿಗೆ ಅಗೌರವ ತೋರಿದರೆ ನನ್ನ ರಕ್ತ ಕುದಿಯುತ್ತದೆ. ಜಾತಿ ಜಾತಿಗಳ ನಡುವೆ ಗಲಾಟೆ ತಂದಿಟ್ಟು ಭ್ರಷ್ಠಾಚಾರ ಮಾಡಿದ ಅವರು ಹಿಂದೂ ಟೆರರಿಸ್ಟ್ ಎಂದು ಸೊಗಡು ಶಿವಣ್ಣ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಮಾತೆತ್ತಿದರೆ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎನ್ನುತ್ತಾರೆ. ಕಾಂಗ್ರೆಸ್ ನಲ್ಲಿ ಯಾರು ಮಿನಿ ಉಗ್ರವಾದಿಗಳು ಇಲ್ಲವೇ? ಅವರಲ್ಲಿ ಯಾರೂ ಜೈಲಿಗೆ ಹೋಗಿ ಬಂದಿಲ್ಲವೇ?ಸಿದ್ದರಾಮಯ್ಯವನರೂ ಜೈಲಿಗೆ ಹೋಗುತ್ತಾರೆ. ಅರ್ಕಾವತಿ ಹಗರಣ ಇದೆಯಲ್ಲವೇ? ಲೋಕಯುಕ್ತಾವನ್ನು ತೆಗೆದು ಎಸಿಬಿ ಮಾಡಿಕೊಂಡು ಸಿದ್ದರಾಮಯ್ಯ ಅರ್ಕಾವತಿ ಹಗರಣದಿಂದ ಬಚಾವಾಗಿದ್ದಾರೆ ಎಂದು ಆರೋಪಿಸಿದ್ದಾರೆ.