ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Krishnaveni K
ಭಾನುವಾರ, 8 ಜೂನ್ 2025 (20:41 IST)
ಬೆಂಗಳೂರು: ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮೊಮ್ಮಗನ ಮದುವೆಯಲ್ಲಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ನಾಯಕರ ದಂಡೇ ಆಗಮಿಸಿತ್ತು. ಇದಕ್ಕೆ ನೆಟ್ಟಿಗರು ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ಎಂದು ಸಖತ್ ಟಾಂಗ್ ಕೊಟ್ಟಿದ್ದಾರೆ.

ಯಡಿಯೂರಪ್ಪ ಪುತ್ರ ಸಂಸದ ಬಿವೈ ರಾಘವೇಂದ್ರ ಮಗನ ಮದುವೆ ಕಾರ್ಯಕ್ರಮಕ್ಕೆ ರಾಜಕೀಯ ಮಾತ್ರವಲ್ಲದೆ ಸಿನಿಮಾ ಗಣ್ಯರೂ ಆಗಮಿಸಿದ್ದರು. ಬಂದ ಗಣ್ಯರೆಲ್ಲರನ್ನೂ ಶಾಲು ಹೊದೆಸಿ ಯಡಿಯೂರಪ್ಪ ಕುಟುಂಬ ಗೌರವಿಸಿತ್ತು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಮೀರ್ ಅಹ್ಮದ್ ಸೇರಿದಂತೆ ಪಕ್ಷಬೇಧ ಮರೆತು ಎಲ್ಲಾ ನಾಯಕರೂ ಪಾಲ್ಗೊಂಡಿದ್ದರು. ಸಿಎಂ ಸಿದ್ದರಾಮಯ್ಯಗೆ ಶಾಲು ಹೊದೆಸಿ ಸನ್ಮಾನಿಸಿದ ಬಿವೈ ರಾಘವೇಂದ್ರ ಕಾಲು ಮುಟ್ಟಿ ನಮಸ್ಕಾರವನ್ನೂ ಮಾಡಿದ್ದಾರೆ. ಬಳಿಕ ಯಡಿಯೂರಪ್ಪ ಕುಟುಂಬ ಒಟ್ಟಾಗಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ರಾಜಕೀಯ ಏನೇ ಇದ್ದರೂ ಯಡಿಯೂರಪ್ಪ ಜೊತೆಗೆ ಸಿದ್ದರಾಮಯ್ಯ ಉತ್ತಮ ಸಂಬಂಧವನ್ನೇ ಹೊಂದಿದ್ದಾರೆ. ಆದರೆ ಇದಕ್ಕೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಹಿಂದಿನಿಂದ ಸಿದ್ದರಾಮಯ್ಯ ಹಾಗೆ, ಹೀಗೇ ಎಂದು ಟೀಕೆ ಮಾಡ್ತೀರಿ, ಈಗ ನೋಡಿದ್ರೆ ಖುಷಿ ಖುಷಿಯಾಗಿ ಪೋಸ್ ಕೊಡ್ತೀರಿ ಎಂದು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments