ಸಿದ್ದರಾಮಯ್ಯನವರಿಗೆ ಪುತ್ರನಿಂದಲೇ ಎದುರಾಯ್ತಾ ಸಂಕಷ್ಟ

Krishnaveni K
ಬುಧವಾರ, 10 ಡಿಸೆಂಬರ್ 2025 (08:39 IST)
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕುರ್ಚಿ ಕದನ ಬೂದಿ ಮುಚ್ಚಿದ ಕೆಂಡದಂತಿರುವಾಗ ಸಿಎಂ ಸಿದ್ದರಾಮಯ್ಯಗೆ ಪುತ್ರ ಯತೀಂದ್ರನಿಂದಲೇ ಸಂಕಷ್ಟ ಎದುರಾಯ್ತಾ ಎಂಬ ಸಂಶಯ ಮೂಡಿದೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಹೈಕಮಾಂಡ್ ಯಾರ ಮೇಲೆ ಒಲವು ತೋರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಸದ್ಯಕ್ಕೆ ಸಿಎಂ ಸ್ಥಾನ ಬದಲಾವಣೆ ತಣ್ಣಗಾಗಿದ್ದರೂ ಅಧಿವೇಶನ ಮುಗಿದ ಬಳಿಕ ಮತ್ತೆ ಭುಗಿಲೇಳುವ ಸಾಧ್ಯತೆಯಿದೆ.

ಇಂತಹ ಸಂದರ್ಭದಲ್ಲಿ ಉಭಯ ನಾಯಕರ ನಡೆಯ ಮೇಲೆ ಹೈಕಮಾಂಡ್ ಹದ್ದಿನಗಣ್ಣಿರಿಸಲಿದೆ. ಯಾವುದೇ ತಪ್ಪಾದರೂ ಸಂಕಷ್ಟ ತಪ್ಪಿದ್ದಲ್ಲ. ಆದರೆ ಈಗ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿ ಡಿಕೆಶಿ ಬಣದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಇದೇ ವಿಚಾರವನ್ನು ಡಿಕೆಶಿ ಬಣ ಹೈಕಮಾಂಡ್ ಮುಂದಿಡಲಿದೆ. ಆಗ ಸಿದ್ದರಾಮಯ್ಯ ತಕ್ಕಡಿ ಕೊಂಚ ಕೆಳಗೆ ಹೋಗಬಹುದು. ಡಿಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರು ಈಗ ತಾಳ್ಮೆಯಿಂದಿದ್ದರೆ ಪುತ್ರ ಮಾಡಿರುವ ಎಡವಟ್ಟು ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೆಲ್ಲ ದಲಿತ ಸಚಿವರ ಹೆಸರು ಕೆಡಿಸಲು ಪ್ರಯತ್ನ: ಡಿಕೆ ಶಿವಕುಮಾರ್

ವಲಸೆ ಬಂದ ಹಕ್ಕಿಗಳಿಗೆ ಹೀಗಾಗುವುದಾ, ಅಸ್ಸಾಂ ಜಿಲ್ಲೆಯಲ್ಲಿ ನಿಜವಾಗ್ಲೂ ಆಗಿದ್ದೇನು

ಹೆಂಡ್ತಿ ಜತೆ ರೋಮ್ಯಾಂಟಿಕ್ ರೀಲ್ ಮಾಡಲು ಹೋಗಿ ಸಂಕಷ್ಟ ತಂದುಕೊಂಡ ಪೊಲೀಸ್ ಅಧಿಕಾರಿ, ಆಗಿದ್ದೇನು ಗೊತ್ತಾ

ಆಸಕ್ತಿ ತೋರಿರುವ, ತೋರದವರ ಬಗ್ಗೆ ಎಐಸಿಸಿಗೆ ಲಿಖಿತ ಮಾಹಿತಿ: ಡಿಕೆ ಶಿವಕುಮಾರ್, Video

ನಿಪಾ ವೈರಸ್ ಹರಡುವಿಕೆ: ಏಷ್ಯಾದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ

ಮುಂದಿನ ಸುದ್ದಿ
Show comments