Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಬೆಂಗಾವಲು ವಾಹನಕ್ಕೆ ಅಡ್ಡ, ಜನಾರ್ದನ ರೆಡ್ಡಿ ಕಾರು ವಶಕ್ಕೆ

JANARDANA REDDY CAR

Sampriya

ಗಂಗಾವತಿ , ಮಂಗಳವಾರ, 8 ಅಕ್ಟೋಬರ್ 2024 (15:57 IST)
Photo Courtesy X
ಗಂಗಾವತಿ: ಈಚೆಗೆ ಸಿಎಂ ಸಿದ್ದರಾಮಯ್ಯ ಅವರು  ಗಂಗಾವತಿ ಮಾರ್ಗವಾಗಿ ಬಳ್ಳಾರಿಗೆ ತೆರಳುವಾಗ ಅವರ ಬೆಂಗಾವಲು ವಾಹನಗಳ ವಿರುದ್ಧ ದಿಕ್ಕಿಗೆ ಶಾಸಕ ಜನಾರ್ದನ ರೆಡ್ಡಿ ಕಾರುಗಳು ಸಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ರೆಡ್ಡಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಝೀರೋ ಟ್ರಾಫಿಕ್ ನಿಯಮ ಉಲ್ಲಂಘಟನೆ ಮಾಡಿದ್ದರ ಅನ್ವಯ ಜನಾರ್ದನ ರೆಡ್ಡಿಯ ಮೂವರು ಕಾರು ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ರೆಡ್ಡಿ ಅವರ ಒಂದು ಹಾಗೂ ಅವರ ಬೆಂಬಲಿಗರ ಎರಡು ಕಾರುಗಳನ್ನು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.

 ನಿಯಮ ಉಲ್ಲಂಘಿಸಿದ ವಾಹನಗಳನ್ನು ಇಲ್ಲಿನ ಸಂಚಾರ ಪೊಲೀಸ್‌ ಠಾಣೆಗೆ ತರಲಾಗದ್ದು ಪೊಲೀಸರು ಪಂಚನಾಮೆ ಮಾಡಿದರು.

ಈ ಘಟನೆ ಕುರಿತು ವಿಡಿಯೊ ಹೇಳಿಕೆ ನೀಡಿರುವ ಜನಾರ್ದನ ರೆಡ್ಡಿ ಅವರು ತುರ್ತು ಕಾರ್ಯಕ್ರಮದ ಹಿನ್ನೆಲೆ ಆ ರೀತಿ ಹೋಗಬೇಕಾಯಿತು. ಬಳ್ಳಾರಿಯ ಮನೆಯಲ್ಲಿ ಅಂದು ಹೋಮ ಆಯೋಜಿಸಲಾಗಿತ್ತು. ತುರ್ತಾಗಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಬೇಕಿದ್ದರೂ ಸಂಚಾರ ದಟ್ಟಣೆಯಲ್ಲಿಯೇ ಸುಮಾರು ಅರ್ಧಗಂಟೆ ಕಾದಿದ್ದೇನೆ. ಯಾರೇ ಮುಖ್ಯಮಂತ್ರಿಯಾದರೂ ಜನರಿಗೆ ತೊಂದರೆ ಕೊಡಬಾರದು ಎಂದಿದ್ದಾರೆ.

ತುರ್ತಾಗಿ ಕಾರ್ಯಕ್ರಮಕ್ಕೆ ಹೋಗಬೇಕಿದ್ದರಿಂದ ಮಾತ್ರ ರಸ್ತೆ ವಿಜಭಕ ದಾಟಿ ಹೋಗಿದ್ದೇನೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಮಾಧ್ಯಮಗಳೂ ಇದನ್ನು ತಪ್ಪಾಗಿ ಗ್ರಹಿಸಿವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಪ್ರಮುಖ ನಗರಗಳಲ್ಲಿ ಇನ್‌ಸ್ಟಾಗ್ರಾಂ ಡೌನ್, ಮೆಟಾ ವಿರುದ್ಧ ಬಳಕೆದಾರರು ಆಕ್ರೋಶ