Publish Date: Wed, 13 Sep 2017 (18:21 IST)
Updated Date: Wed, 13 Sep 2017 (18:26 IST)
ಬಾಗಲಕೋಟೆ: ಸಿದ್ದಗಂಗಾ ಶ್ರೀಗಳು `ಭಾರತರತ್ನ’ಕ್ಕಾಗಿ ಮಾತು ಬದಲಿಸಬಾರದು ಎಂದು ಶ್ರೀಗಳ ವಿರುದ್ಧ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳಿಗೆ ವಯಸ್ಸಾಗಿದೆ. ಅವರಿಗೆ ನೆನಪಿನ ಶಕ್ತಿ ಉಳಿದಿಲ್ಲ. ಬೇಲಿಮಠದ ಶ್ರೀಗಳನ್ನು ನೀವು ಯಾರು ಎಂದು ಕೇಳಿದ್ದರು. ಇದನ್ನೇ ಬಿ.ಎಸ್.ಯಡಿಯೂರಪ್ಪ, ವಿ.ಸೋಮಣ್ಣ ಸೇರಿದಂತೆ ಮತ್ತಿತರರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಂ.ಬಿ.ಪಾಟೀಲರ ಬಳಿ ಸ್ವತಂತ್ರ ಧರ್ಮದ ಬಗ್ಗೆ ಹೇಳಿದ್ದಾರೆ. ಇದಾದ ನಂತರ ಮಠದಿಂದ ಎರಡು ಪತ್ರ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಶ್ರೀಗಳು ಕೇವಲ ಪ್ರಶಸ್ತಿಗಾಗಿ ಸ್ವಾಮೀಜಿ ಮಾತು ತಿರುಗಿಸಬಾರದು. ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಿಸುವ ಆಮಿಷ ಒಡ್ಡಲಾಗಿದೆ. ಭಾರತರತ್ನ ಆಮಿಷದ ಕುರಿತು ಖಚಿತ ಮಾಹಿತಿ ಬಂದಿದೆ. ಶೀಘ್ರದಲ್ಲಿಯೇ ನಾವು ಇದನ್ನು ಸಾಬೀತು ಮಾಡುತ್ತೇವೆ ಎಂದು ಮಾತೆ ಮಹಾದೇವಿ ಹೇಳಿದ್ದಾರೆ.