ಕಲಬುರಗಿ: ಪ್ಯಾಲೆಸ್ತೀನ್‌ಗೆ ಕೇಂದ್ರ ಸರ್ಕಾರವೇ ಬೆಂಬಲ ಸೂಚಿಸಿದ್ದು, ಹೀಗಿರುವಾಗ ಧ್ವಜ ಹಿಡಿದುಕೊಂಡು ಹೋದರೆ ಏನ್ ತಪ್ಪು ಎಂದು ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈಚೆಗೆ ಚಿಕ್ಕಮಗಳೂರು ಮತ್ತು ಕೋಲಾರದಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಓಡಾಟ ಮಾಡಿದ ಪ್ರಕರಣ ಸಂಬಂಧ ಅವರು ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರ ಪ್ಯಾಲೆಸ್ತೀನ್‌ಗೆ ಬೆಂಬಲ ಘೋಷಣೆ ಮಾಡಿರುವ ಕಾರಣವೇ ಧ್ವಜ ಹಿಡಿದಿದ್ದಾರೆ, ಇಲ್ಲಾಂದರೆ ಹಿಡಿಯುತ್ತಿರಲಿಲ್ಲ. ಬೇರೆ ದೇಶದ ಬಗ್ಗೆ ಘೋಷಣೆ ಕೂಗಿದರೆ ಅದು ತಪ್ಪು. ಹಾಗೆ ಮಾಡಿದವರು ದೇಶದ್ರೋಹಿಗಳು. ಅಂಥವರನ್ನು ಗಲ್ಲಿಗೇರಿಸಬೇಕು. ಹಾಗೆಂದು ಧ್ವಜ ಹಿಡಿದರೆ ತಪ್ಪಿಲ್ಲ ಎಂದು ಜಮೀರ್ ಹೇಳಿದರು.
ನಾಗಮಂಗಲ ಗಲಭೆ ವಿಚಾರದಲ್ಲಿ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಹಿಂದೂ ಮುಸ್ಲಿಂ ಜಗಳ ತಂದಿಟ್ಟು ಮತ ಕೇಳುತ್ತಾರೆ. ಆದರೆ, ನಾವು ಹಾಗಲ್ಲ. ಮಾಡಿದ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಯಾಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.