ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ವಿಚಾರಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ಬಿಗಿ ಕ್ರಮ ತೆಗೆದುಕೊಂಡಿದ್ದರೆ ಹೀಗಾಗುತ್ತಿರಲಿಲ್ಲ. ಇಬ್ಬರನ್ನು ಸಸ್ಪೆಂಡ್ ಅಲ್ಲ, ಕೆಲಸದಿಂದಲೇ ತೆಗೆದು ಹಾಕಬೇಕು. ಅದರಲ್ಲೂ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರು ಅವರಿಬ್ಬರಿಗೆ ದೇವಮಾನವ ಎನ್ನುತ್ತಿದ್ದಾರೆ. ವಿಶ್ವಮಾನವ ಕುವೆಂಪು ಅವರ ಕ್ಷೇತ್ರದ ತೀರ್ಥಹಳ್ಳಿಯವರು ಈ ರೀತಿ ಮಾಡುತ್ತಾರೆ ಎಂದರೆ, ಏನು ಹೇಳಬೇಕು ಎಂದು ಆರಗ ಜ್ಞಾನೇಂದ್ರ ಬಗ್ಗೆ ಲೇವಡಿ ಮಾಡಿದ್ದಾರೆ. ಸದನದಲ್ಲಿ ಯಡಿಯೂರಪ್ಪ ವಿದಾಯ ಭಾಷಣದ ಬಗ್ಗೆ ಮಾತಾನಾಡಿದ ಕುಮಾರಸ್ವಾಮಿ, ಈ ಬಗ್ಗೆ ನಾನು ವಿರೋಧವಾಗಿ ಏನೂ ಹೇಳುವುದಿಲ್ಲ. ಅವರು ಪಾಪ ವಿದಾಯದ ಭಾಷಣ ಮಾಡಿದ್ದಾರೆ. ಎಲ್ಲರೂ ಕೂಡ ಒಂದಲ್ಲ ಒಂದು ದಿನ ಸದನದಲ್ಲಿ ವಿದಾಯದ ಭಾಷಣ ಮಾಡಲೇಬೇಕು. ಆದರೆ ಪಕ್ಷ ನನಗೆ ಎಲ್ಲವೂ ಕೊಟ್ಟಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ, 2013ರಲ್ಲಿ ಕೆಜೆಪಿ ಕಟ್ಟಿದಾಗ ಇವರಿಗೆ ಪಕ್ಷ ಏನೂ ನೀಡಿರಲಿಲ್ಲವೇ? ಆಗ ಇದೇ ಬಿಜೆಪಿ ಬಗ್ಗೆ ಇವರು ಏನೇನು ಭಾಷಣ ಮಾಡಿದ್ದರು. ಇವೆಲ್ಲ ದಾಖಲೆಗಳು ನಮ್ಮ ಬಳಿ ಇವೆ ಎಂದು ಕುಮಾರಸ್ವಾಮಿ ಹೇಳಿದ್ರು.