Publish Date: Wed, 13 Sep 2023 (18:21 IST)
Updated Date: Wed, 13 Sep 2023 (19:47 IST)
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಎತ್ತುಗಳು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ನಡೆದಿದೆ.. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎತ್ತುಗಳು ವಿದ್ಯುತ್ ಶಾಕ್ ತಗುಲಿ ಎತ್ತುಗಳು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.. ದಿನ ನಿತ್ಯದಂತೆ ಜಮೀನನಲ್ಲಿ ಕೆಲಸ ಮಾಡಿ ಮನೆಗೆ ಬಂದು ಎತ್ತುಗಳನ್ನ ಕಟ್ಟಿ ಹಾಕಿದ್ರು. ಏಕಾಏಕಿ ಕೊಟ್ಟಿಗೆಯಲ್ಲಿ ವಿದ್ಯುತ್ ವೈರನಿಂದ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡ ಪರಿಣಾಮ ಎತ್ತುಗಳು ಸಾವನ್ನಪ್ಪಿದೆ. ಸ್ಥಳೀಯರ ನೆರವಿನಿಂದ ಎರಡೂ ಎತ್ತುಗಳ ಪೈಕಿ ಒಂದು ಎತ್ತು ಬದುಕಿ ಉಳಿದಿದೆ. ರೈತ ಶ್ರೀಶೈಲ್ ಮಹಾಮನಿ ಎಂಬುವರಿಗೆ ಸೇರಿದ ಎತ್ತುಗಳು ಇವಾಗಿವೆ. ಎತ್ತು ಸಾವನ್ನಪ್ಪಿದರಿಂದ ರೈತನ ಆಕ್ರಂದನ ಮುಗಿಲುಮುಟ್ಟಿದೆ.ಇನ್ನೂ ರಾಜ್ಯ ಸರ್ಕಾರ ನೆರವು ನೀಡಬೇಕೆಂದು ರೈತ ಶ್ರೀಶೈಲ್ ಮನವಿ ಮಾಡಿದ್ದಾರೆ.