Publish Date: Fri, 01 Jul 2022 (20:56 IST)
Updated Date: Fri, 01 Jul 2022 (20:59 IST)
ತಿರುವನಂತಪುರಂನಲ್ಲಿ ನಿನ್ನೆ ರಾತ್ರಿ ಆಡಳಿತಾರೂಢ CPI ರಾಜ್ಯ ಪ್ರಧಾನ ಕಚೇರಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಕ ವಸ್ತು ಎಸೆದು ಪರಾರಿಯಾಗಿದ್ದಾನೆ. ಈ ದೃಶ್ಯ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ 11.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ರಾಜಧಾನಿಯ ಹೃದಯಭಾಗದಲ್ಲಿರುವ ಎಕೆಜಿ ಸೆಂಟರ್‌ಗೆ ಸ್ಫೋಟಕ ವಸ್ತು ಎಸೆದಿದ್ದಾನೆ. ಕೇಂದ್ರ ಕಚೇರಿಯಲ್ಲಿ ತಂಗಿದ್ದ ಪಕ್ಷದ ಕೆಲವು ಮುಖಂಡರು, ಕಟ್ಟಡದ ಹೊರಗೆ ಸ್ಫೋಟದ ಶಬ್ದ ಕೇಳಿಸಿದ್ದರಿಂದ ಹೊರ ಬಂದು ನೋಡಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕಾಗಮಿಸಿದ CPI ಮುಖಂಡರು ಇದೊಂದು ಬಾಂಬ್ ದಾಳಿ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.