Publish Date: Fri, 01 Jul 2022 (20:53 IST)
Updated Date: Fri, 01 Jul 2022 (20:56 IST)
ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಆರಂಭಗೊಂಡಿದೆ. ರಥೋತ್ಸವಕ್ಕೆ ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಭಕ್ತರಿಗೆ ನಿಬಂಧನೆಗಳನ್ನು ಹೇರಲಾಗಿತ್ತು. ಇದೀಗ ದೇಶದಲ್ಲಿ ಕೋವಿಡ್ ನಿಯಂತ್ರಣದಲ್ಲಿರುವ ಕಾರಣ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಇಂದಿನಿಂದ 9 ದಿನಗಳ ವರೆಗೆ ಪುರಿ ಜಗನ್ನಾಥ ರಥಯಾತ್ರೆ ಪ್ರಾರಂಭವಾಗಿದೆ.ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ದೇಶದ ಇತರ ರಾಜ್ಯಗಳಿಂದ ಸಾವಿರಾರು ಭಕ್ತರು ಪುರಿಗೆ ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 12ನೇ ಶತಮಾನದಲ್ಲಿ ನಿರ್ಮಿಸಲಾದ ರಥಗಳು ರಥಯಾತ್ರೆಗೆ ಸಿದ್ದಗೊಂಡಿದ್ದಗೊಂಡಿವೆ. ಇಂದು ಬೆಳಗ್ಗೆಯಿಂದಲೇ ಮಂದಿರದಲ್ಲಿನ ಜಗನ್ನಾಥ, ಬಲಭದ್ರ, ಸುಭದ್ರ ಮೂರ್ತಿಗಳಿಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.