ಶಿವಮೊಗ್ಗ: ಮನೆ ಬೆಕ್ಕು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಲ್ಲಿನ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ. ಮೃತ ಮಹಿಳೆಯನ್ನು 50ವರ್ಷದ ಗಂಗೀಬಾಯಿ ಎಂದು ಗುರುತಿಸಲಾಗಿದೆ.
ಗಂಗೀಬಾಯಿ ಅವರಿಗೆ ಕಚ್ಚುವ ಮುನ್ನಾ ಇದೇ ಬೆಕ್ಕು ತರಲಘಟ್ಟದ ಕ್ಯಾಂಪ್ನಲ್ಲಿರುವ ಯುವಕನೋರ್ವನ ಮೇಲೆ ದಾಳಿ ಮಾಡಿತ್ತು. ಆತ ಸೂಕ್ತ ಜೌಷಧಿ ಪಡೆದುಕೊಂಡಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಆದರೆ ಮಹಿಳೆಗೆ ಬೆಕ್ಕು ಕಚ್ಚಿದ ಸಂದರ್ಭ ಆಕೆ ಕ್ಯಾರೇ ಎನ್ನಲಿಲ್ಲ. ಈ ಸಂದರ್ಭದಲ್ಲಿ ಸೂಕ್ತ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದರೆ ಪ್ರಾಣಪಾಯದಿಂದ ಪಾರಾಗುತ್ತಿದ್ದರು.
ಬೆಕ್ಕಿನ ದಾಳಿಯ ಗಾಯದಿಂದ ಚೇತರಿಸಿಕೊಂಡ ಕಾರಣ ಮಹಿಳೆ ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯಲಿಲ್ಲ. ಕಳೆದ ಎರಡು ದಿನದಿಂದ ಮಹಿಳೆಯ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ. ದೇಹದಲ್ಲಿ ನಂಜು ಏರುತ್ತಲೇ ಹೋಗಿತ್ತು. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆಯಲ್ಲಿ ಮಹಿಳೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯು ಇಂದು ಮೃತಪಟ್ಟಿದ್ದಾಳೆ.
ಈ ಬಗ್ಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಟಿ.ಡಿ ತಿಮ್ಮಪ್ಪ ಪ್ರತಿಕ್ರಿಯಿಸಿದ್ದು, ನಾಯಿಯು ಬೆಕ್ಕಿಗೆ ಕಚ್ಚಿರಬೇಕು. ಇದರಿಂದ ಬೆಕ್ಕಿಗೆ ರೇಬಿಸ್ ಇದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಹೀಗಾಗಿ ಮಹಿಳೆ ರೇಬಿಸ್ನಿಂದ ಮೃತಪಟ್ಟಿದ್ದಾಳೆಂದು ಶಂಕಿಸಲಾಗಿದೆ.