ಯಡಿಯೂರಪ್ಪಗೆ ಶಾಕ್ : ಯೂ ಟರ್ನ್ ಹೊಡೆದ ಪೂಜಾರಿ

ಗುರುವಾರ, 10 ಅಕ್ಟೋಬರ್ 2019 (21:09 IST)
ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನ ನೇಮಕ ಮಾಡಿ ಸಿಎಂ ಆದೇಶ ಮಾಡಿದ್ದಾರೆ. ಆದರೆ ಕೆಲವರು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಗೋಕಾಕ ಕ್ಷೇತ್ರದ ಮತದಾರರ ಅಭಿಪ್ರಾಯದ ಮೇರೆಗೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹೀಗಂತ ಬಿಜೆಪಿ ಮುಖಂಡ ಅಶೋಕ ಪೂಜಾರಿ, ನಡುಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸಿದ್ದಾರೆ. ಇದು ಸಿಎಂಗೆ ಶಾಕ್ ನೀಡಿದಂತಾಗಿದೆ.

ಗೋಕಾದಲ್ಲಿ ಮಾತನಾಡಿದ ಅಶೋಕ ಪೂಜಾರಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ನನ್ನನ್ನು ಅಧ್ಯಕ್ಷನನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು ಸಂತೋಷ.

ಆದರೆ ನಮ್ಮದು ಗೋಕಾದಲ್ಲಿಯ ವ್ಯವಸ್ಥೆ ಬದಲಾವಣೆಗಾಗಿ ಕೈಗೊಂಡಿರುವ ಹೋರಾಟವಾಗಿದೆ. ಜನರ ಅಭಿಪ್ರಾಯದ ಮೇರೆಗೆ ಅಧ್ಯಕ್ಷನಾಗುವ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧ ಖಂಡಿಸಿ ರೋಡಿಗಿಳಿದ ಕಾಂಗ್ರೆಸ್