ರಾಮನವಮಿ ಆಚರಿಸಿದ್ದಕ್ಕೆ ಹಲ್ಲೆಗೊಳಗಾದ ಯುವಕರ ಮನೆಗೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ

Krishnaveni K
ಗುರುವಾರ, 18 ಏಪ್ರಿಲ್ 2024 (09:16 IST)
Photo Courtesy: Instagram
ಬೆಂಗಳೂರು: ರಾಮನವಮಿ ಆಚರಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದ ಯುವಕರ ಮೇಲೆ ಅನ್ಯಕೋಮಿನ ಯುವಕರು ದಾಳಿ ನಡೆಸಿದ್ದಕ್ಕೆ ಈಗ ರಾಜಕೀಯ ರಂಗು ಅಂಟಿಕೊಳ್ಳುತ್ತಿದೆ. ಯುವಕರ ಮನೆಗೆ ನಿನ್ನೆ ರಾತ್ರಿ ಸಂಸದೆ, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ.

ರಾಹುಲ್ ಮತ್ತು ಪವನ್ ಎಂಬ ಇಬ್ಬರು ಯುವಕರು ಕಾರಿನಲ್ಲಿ ತೆರಳುತ್ತಿದ್ದವರು ಭಗವಧ‍್ವಜ ಹಿಡಿದು ಜೈಶ್ರೀರಾಮ್ ಎನ್ನುತ್ತಾ ಸಾಗುತ್ತಿದ್ದರು. ಈ ವೇಳೆ ಮಸೀದಿ ಬಳಿ ಅನ್ಯಕೋಮಿನ ಯುವಕರಿಬ್ಬರು ಕಾರು ಅಡ್ಡಗಟ್ಟಿ, ಜೈಶ್ರೀರಾಮ್ ಅನ್ನಬೇಕಾ? ಜೈಶ್ರೀರಾಮ್ ಎಲ್ಲ ಇಲ್ಲ. ಓನ್ಲೀ ಅಲ್ಲಾಹು ಅಕ್ಬರ್ ಎಂದು ನಿಂದಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಯುವಕರು ನಿಮ್ಮ ಹಬ್ಬದ ವೇಳೆ ನಾವು ಹೀಗೆ ಮಾಡುತ್ತೇವಾ ಎಂದು ಪ್ರಶ್ನಿಸಿದ್ದಾರೆ. ಕಾರಿನಲ್ಲಿದ್ದ ಯುವಕರು ಈ ರೀತಿ ಪ್ರಶ್ನೆ ಮಾಡಿ ಕಾರಿನಿಂದ ಇಳಿದಿದ್ದಾರೆ. ಈ ವೇಳೆ ಅನ್ಯಕೋಮಿನ ಮತ್ತಷ್ಟು ಯುವಕರು ಜೊತೆ ಸೇರಿದ್ದು ಕಾರಿನಲ್ಲಿದ್ದವರಿಗೆ ಹಲ್ಲೆ ಮಾಡಿದ್ದಾರೆ.

ಘಟನೆ ಕುರಿತಂತೆ ಯುವಕರು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಎಫ್ ಐಆರ್ ದಾಖಲಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ನಡುವೆ ನಿನ್ನೆ ತಡರಾತ್ರಿ ಸಂಸದೆ ಶೋಭಾ ಕರಂದ್ಲಾಜೆ ಯುವಕರ ಮನೆಗೆ ಭೇಟಿ ನೀಡಿದ್ದಾರೆ.

ಘಟನೆ ವಿವರ ತಿಳಿದುಕೊಂಡ ಶೋಭಾ ‘ಧೈರ್ಯವಾಗಿರಿ, ನಿಮ್ಮ ಜೊತೆಗೆ ನಾವಿದ್ದೇವೆ. ನಾನು ಡಿಸಿಪಿ ಜೊತೆ ಮಾತನಾಡುತ್ತೇನೆ. ಯಾವುದಕ್ಕೂ ಹೆದರಬೇಡಿ’ ಎಂದು ಸಾಂತ್ವನ ಹೇಳಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಘಟಕ ಇಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ಇಂದು ಬೆಳಿಗ್ಗೆ 9.30 ಕ್ಕೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಮುಂಭಾಗ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಸ್ಫೋಟಕ ಹೇಳಿಕೆ

ಮೊಬೈಲ್ ವಾಲ್ಯೂಮ್ ಕಡಿಮೆ ಮಾಡಿ ಎಂದಿದ್ದಕ್ಕೆ ಮಹಿಳೆಯಿಂದ ಪೆಪ್ಪರ್ ಸ್ಪ್ರೇ, Video

ಬೆಳಗಾವಿ ಅಧಿವೇಶನ, ಬಿಜೆಪಿ ಆರೋಪಕ್ಕೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯೆ ಹೀಗಿತ್ತು

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಈ ದಿನದಿಂದ ಹೋರಾಟ ಶುರು

ಇಲ್ಲಿದೆ ಶಿವನಿಂದ ಪ್ರೇರಿತವಾದ ಗಂಡು ಮಗುವಿನ ಕೆಲ ಹೆಸರುಗಳು

ಮುಂದಿನ ಸುದ್ದಿ
Show comments