Select Your Language

Notifications

webdunia
webdunia
webdunia
webdunia

‘ತಾಕತ್ತಿದ್ದರೆ ಭಟ್ಟರನ್ನು ಒಮ್ಮೆ ಬಂಧಿಸಿ ನೋಡಿ ಏನಾಗುತ್ತದೆಂದು’

‘ತಾಕತ್ತಿದ್ದರೆ ಭಟ್ಟರನ್ನು ಒಮ್ಮೆ ಬಂಧಿಸಿ ನೋಡಿ ಏನಾಗುತ್ತದೆಂದು’
Mangalore , ಗುರುವಾರ, 13 ಜುಲೈ 2017 (13:26 IST)
ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ನಂತರ ಮತ್ತಷ್ಟು ಉದ್ವಿಗ್ನಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


‘ಕಲ್ಲಡ್ಕ ಹಿಂಸಾಚಾರಗಳಿಗೆ ಪ್ರಭಾಕರ ಭಟ್ಟರೇ ಕಾರಣ ಎನ್ನುತ್ತಿರುವ ಸಚಿವ ರಮಾನಾಥ್ ರೈಗೆ ತಾಕತತಿದ್ದರೆ ಒಮ್ಮೆ  ಅವರನ್ನು ಬಂಧಿಸಲಿ ನೋಡೋಣ’ ಎಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನಾ  ಸಭೆಯಲ್ಲಿ ಆವೇಶ ಭರಿತರಾಗಿ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಕೊಲೆ ನೋಡಿ ಎಂಜಾಯ್ ಮಾಡುತ್ತಿದೆ. ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಶೋಭಾ ಗುಡುಗಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಈಶ್ವರಪ್ಪ ಸಿಎಂ ಸಿದ್ಧರಾಮಯ್ಯ ಮತ್ತು ದ,ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕ್ರಿಯೆಗೆ ಯಾವತ್ತೂ ಪ್ರತಿಕ್ರಿಯೆಯಿರುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಗುಡುಗಿದ್ದಾರೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮೃತ ಶರತ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲಡ್ಕ ಪ್ರಭಾಕರ್‌ರನ್ನು ಮುಟ್ಟಿ ನೋಡಿ: ಸಚಿವ ರೈಗೆ ಕರಂದ್ಲಾಜೆ ಸವಾಲ್