Select Your Language

Notifications

webdunia
webdunia
webdunia
webdunia

ನಮ್ಮನ್ನು ಬಂಧಿಸಿದ್ರೆ ಕಾಂಗ್ರೆಸ್ ಶವದ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಂತೆ: ಕರಂದ್ಲಾಜೆ

ನಮ್ಮನ್ನು ಬಂಧಿಸಿದ್ರೆ ಕಾಂಗ್ರೆಸ್ ಶವದ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಂತೆ: ಕರಂದ್ಲಾಜೆ
ಮಂಗಳೂರು , ಗುರುವಾರ, 13 ಜುಲೈ 2017 (13:25 IST)
ಶರತ್ ಮಡಿವಾಳ ಹತ್ಯೆಯ ಹಿಂದಿರುವ ವ್ಯಕ್ತಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು. ನನ್ನನ್ನು ಮತ್ತು ಕಲ್ಲಡ್ಕ ಪ್ರಭಾಕರ್‌‌ರನ್ನು ಬಂಧಿಸಿದಲ್ಲಿ ಕಾಂಗ್ರೆಸ್ ಶವದ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಸಿದ್ದಾರೆ.

ಸಚಿವ ರಮಾನಾಥ್ ರೈಗೆ ತಾಕತ್ತಿದ್ರೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ರನ್ನು ಮುಟ್ಟಿ ನೋಡಲಿ ಎಂದು 
 
ನಗರದಲ್ಲಿ ಆಯೋಜಿಸಲಾದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಭಾಕರ್‌ರನ್ನು ಕೋಮುವಾದಿ ಎಂದು ಬ್ರಾಂಡ್ ಮಾಡಲು ಸರಕಾರ ಹೊರಟಿದೆ. ಶರತ್ ಹತ್ಯೆಯನ್ನು ಕಂಡು ಕಾಂಗ್ರೆಸ್ ಸಂತಸಪಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
 
ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರನ್ನು ನಿಯಂತ್ರಿಸಲು ಸಿಎಂ ಸಿದ್ದರಾಮಯ್ಯ ಸರಕಾರ ಹೊರಟಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ