ಕಾಂಗ್ರೆಸ್ ವೋಟ್ ಹಾಕಿದ್ರೆ ಮಾತ್ರ ದಕ ಜಿಲ್ಲೆಯವರಿಗೆ ಸವಲತ್ತಾ: ಶೋಭಾ ಕರಂದ್ಲಾಜೆ

Krishnaveni K
ಶನಿವಾರ, 31 ಮೇ 2025 (17:18 IST)
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗಲೆಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಕೆಡುತ್ತದೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಆರೋಪಿಸಿದ್ದಾರೆ.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಶಾಂತಿ ಕೆಡಲು ಕಾಂಗ್ರೆಸ್ ಸರಕಾರ, ಅವರ ಇಬ್ಬಗೆಯ ನೀತಿ ಹಾಗೂ ತುಷ್ಟೀಕರಣದ ನೀತಿ ಕಾರಣ ಎಂದು ಅವರು ಆಕ್ಷೇಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸಲ್ಮಾನರಿಗೆ ರಕ್ಷಣೆ ಇಲ್ಲ; ಅವರು ಮಾತನಾಡುವ ಹಾಗೆ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದರು ಎಂದರಲ್ಲದೆ, ದಿನೇಶ್ ಗುಂಡೂರಾವ್ ಅವರು ಏನು ಮಾತನಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು. ಯಾರು ರಕ್ಷಣೆ ಕೊಡಬೇಕು? ಯಾಕೆ ರಕ್ಷಣೆ ಸಿಗುತ್ತಿಲ್ಲ ಎಂದು ಕೇಳಿದರು. ದಿನೇಶ್ ಗುಂಡೂರಾವ್ ಅವರ ನೀತಿ ಕೇವಲ ತುಷ್ಟೀಕರಣ ಮತ್ತು ಮತಬ್ಯಾಂಕನ್ನು ತೋರಿಸುತ್ತದೆ ಎಂದು ನುಡಿದರು.

ಮತಬ್ಯಾಂಕ್ ಬಿಟ್ಟು ಬೇರೇನೂ ಕಾಂಗ್ರೆಸ್ಸಿಗರಿಗೆ ಕಾಣುತ್ತಿಲ್ಲ; ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯೇ ಉದಾಹರಣೆ ಎಂದು ದೂರಿದರು. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಸರಕಾರಿ ಯೋಜನೆ ಬೇಕು. ಆದರೆ ನಾವು ಬೇಡ ಎಂದಿದ್ದಾರೆ; ಇದರ ಅರ್ಥ ಏನು ಎಂದು ಕೇಳಿದರು. ಯಾರು ನಿಮಗೆ ಮತ ಹಾಕಿದ್ದಾರೋ ಅವರಿಗೆ ಮಾತ್ರ ಗ್ಯಾರಂಟಿ ಕೊಡುವವರೇ? ಅವರು ಮಾತ್ರ ಸರಕಾರಿ ಯೋಜನೆಯ ಸೌಲಭ್ಯ ಪಡೆಯಬೇಕೇ ಎಂದು ಕೇಳಿದರು.
 
ನಿಮ್ಮ ಉದ್ದೇಶ ಏನು? ನಿಮ್ಮ ಮಾತೇನು ಎಂದು ನಮಗೆ ಅರ್ಥವಾಗುತ್ತಿಲ್ಲ. ಹಿಂದೆ ಸಿದ್ದರಾಮಯ್ಯನವರು ಜಾತಿ ಜಾತಿಯನ್ನು ಒಡೆಯಲು ಶುರು ಮಾಡಿದ್ದರು. 2013ರ ಸರಕಾರದಲ್ಲೂ ಜಾತಿ ಜಾತಿ ನಡುವೆ ವೈಷಮ್ಯ ತಂದ ಸರಕಾರ ನಿಮ್ಮದು. ಲಿಂಗಾಯತರನ್ನು ಒಡೆದಿದ್ದರು. ಕೇವಲ ಒಂದು ಜಾತಿಯವರಿಗೆ ಮಾತ್ರ ಶಾಲಾ ಪ್ರವಾಸ ಮಾಡಿದ್ದರು ಎಂದು ಆಕ್ಷೇಪಿಸಿದರು.
 
 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದ್ವೇಷ ಭಾಷಣ ಕಾರುವವರಿಗೆ ಮುಂದೈತೆ ಮಾರಿಹಬ್ಬ: ವಿಧಾನಸಭೆಯಲ್ಲಿ ಮಂಡನೆಯಾಯ್ತು ಪ್ರತಿಬಂಧಕ ಮಸೂದೆ

ಧರ್ಮಸ್ಥಳ ಪ್ರಕರಣದ ಸೂತ್ರಧಾರಿಗಳು ಸಿಎಂ ಸುತ್ತ ಇದ್ದಾರೆ: ಬಿವೈ ವಿಜಯೇಂದ್ರ

ಬೆದರಿಕೆಯಾಗಿರುವ ಬಜರಂಗದಳವನ್ನು ನಿಷೇಧಿಸಬೇಕು: ಬಿಕೆ ಹರಿಪ್ರಸಾದ್ ಒತ್ತಾಯ

ವಿಪಕ್ಷ ನಾಯಕರು ಮಾತನಾಡುವಾಗ ಅದನ್ನು ಕೇಳುವ ವ್ಯವಧಾನವೂ ಇಲ್ಲ: ಬಿವೈ ವಿಜಯೇಂದ್ರ

UNESCO ಪಟ್ಟಿಗೆ ಸೇರ್ಪಡೆಗೊಂಡ ದೀಪಾವಳಿ, ಸಂತಸ ಹಂಚಿಕೊಂಡ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments