ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರಾಭಿವೃದ್ಧಿ ದೃಷ್ಟಿಲಿ ಮಾಡಲು ಹೊರಟಿರುವ ಡಾ.ಶಿವರಾಮಕಾರಂತ ಬಡಾವಣೆ ಯೋಜನೆಯ ಅನುಷ್ಠಾನಕ್ಕೆ ರೈತರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. 2008 ರಲ್ಲಿ ಡಾ.ಶಿವರಾಂಕಾರಂತ ಬಡಾವಣೆ ಯೋಜನೆಯ ಪ್ರಕ್ರಿಯೆ ಯಲಹಂಕ ಭಾಗದಲ್ಲು ಪ್ರಾರಂಭವಾಗಿತ್ತು.. ಯಲಹಂಕ ಹೋಬಳಿ ಮತ್ತು ಹೆಸರಘಟ್ಟ ಹೋಬಳಿಗಳ 17ಗ್ರಾಮಗಳಿಂದ 3545 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಪ್ರಾಥಮಿಕ ಅಧುಸೂಚನೆ ಹೊರಡಿಸಿತ್ತು.. ಆದರೆ ಗ್ರಾಮಸ್ಥರು ಮತ್ತು ಸ್ಥಳೀಯರು 2013 ರಲ್ಲಿ ಮಾನ್ಯ ಹೈಕೋರ್ಟ್ ನಲ್ಲಿ ಅರ್ಜಿಸಲ್ಲಿಸಿ ಯೊಜನೆಯ ಅನುಷ್ಠಾನಕ್ಕೆ ತಡೆ ತಂದರು.. 2014 ರವರೆಗೂ ಸುಮ್ಮನಿದ್ದ ಸರ್ಕಾರ ಇದೀಗ 2018 ರಿಂದ ಮತ್ತೆ ಯೋಜನೆಯ ಅನುಷ್ಟಾನಕ್ಕೆ ಆದೇಶಿಸಿದೆ.. ಈ ಬಗ್ಗೆ ಸುಪ್ರೀಂ ಕೋರ್ಟ್ ನ ಅಣತಿಯಂತೆ ನಾವು ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎನ್ನುತ್ತಿದೆ ಬಿಡಿಎ.. ಆದರೆ ಭೂಸ್ವಾಧೀನದಿಂದ ರೈತರಿಗೆ ಶೇ 40 ರಷ್ಟು, ಶೇ 60ರಷ್ಟು ಪರಿಹಾರ ಸಿಗುತ್ತದೆ ಎಂಬುದರ ಬಗ್ಗೆ ಸ್ಪಷ್ಠತೆ ಇಲ್ಲ.. ಈಗಾಗಲೇ ಉದ್ದೇಶಿತ 17ಹಳ್ಳಿಗಳಲ್ಲಿ ಶೇ 80 ರಷ್ಟು ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ.. ಈಗಾಗಲೇ ಸರ್ಕಾರ 50ರಿಂದ 60ಕ್ಕು ಹೆಚ್ಚು ಮನೆಗಳನ್ನು ಕೆಡವಿದೆ.. ಇದರಿಂದ ಮನೆ ಕಟ್ಟಿಕೊಂಡಿರುವ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ.. ಭೂಮಾಫಿಯ ಮತ್ತು ಕೆಲವರ ರಾಜಕೀಯ ದುರುದ್ದೇಶದಿಂದ ರೈತರು ಮತ್ತು 17ಹಳ್ಳಿ ಜನತೆಗೆ ಇದರಿಂದ ತೊಂದರೆಯಾಗುತ್ತದೆ.. ಆದ್ದರಿಂದ ಈ ಯೋಜನೆಯ ಅನುಷ್ಠಾನವನ್ನು ಸರ್ಕಾರ ಕೈಬಿಡಬೇಕು.. ಎಂದು ಯಲಹಂಕದಲ್ಲಿ ರಾಜ್ಯ ರೈತಸಂಘ, ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಸಾವಿರಾರು ಜನ ಮತ್ತು ಗ್ರಾಮಸ್ಥರು ಧರಣಿ ಸತ್ಯಾಗ್ರಹ ನಡೆಸಿದರು.. ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ರವರೇ ಪ2008 ರಲ್ಲಿ ಯೋಜನೆ ವಿರುದ್ಧ , ರೈತರಪರ ನಿಂತಿದ್ದವರು ಈಗ ಒತ್ತಡಗಳಿಗೆ ಮಣಿದು ಬಿಡಿಎ ಯೋಜನೆಯ ಅನುಷ್ಠಾನಕ್ಕೆ ಮುಂದಾಗುತ್ತಿದ್ದಾರೆ..ಇದು ತಮ್ಮದೇ ಕ್ಷೇತ್ರದ ಜನತೆಗೆ ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.. ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು..ಹಾಗೆಯೇ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಯೋಜನೆಯನ್ನು ಕೈ ಬಿಡಲಾಗುತ್ತಿದೆ ಎಂಬುದನ್ನು ತಿಳಿಸಬೇಕು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ..ರೈತರಿಗೆ ಮತ್ತು ಗ್ರಾಮಸ್ಥರಿಗೆ ತೊಂದರೆಯಾದರೆ ದೇವೇಗೌಡರು, ಕುಮಾರಸ್ವಾಮೀ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಮುಂಗಾರುಮಳೆ ಫೇಮ್ ಇ.ಕೃಷ್ಣಪ್ಪ ತಿಳಿಸಿದರು.. ಇದೇ ವೇಳೆ ಸರ್ಕಾರದ ಪರ ಆಗಮಿಸಿದ್ದ ಎ.ಸಿ.ರಂಗನಾಥ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು..