Select Your Language

Notifications

webdunia
webdunia
webdunia
webdunia

ಯುವತಿಯನ್ನು ಮನೆಗೆ ಡ್ರಾಪ್ ಮಾಡುವ‌ ವೇಳೆ ಬೈಕ್ ಅಡ್ಡಗಟ್ಟಿ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ‌

ಯುವತಿಯನ್ನು ಮನೆಗೆ ಡ್ರಾಪ್ ಮಾಡುವ‌ ವೇಳೆ ಬೈಕ್ ಅಡ್ಡಗಟ್ಟಿ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ‌
bangalore , ಭಾನುವಾರ, 19 ಸೆಪ್ಟಂಬರ್ 2021 (21:05 IST)
ಬೆಂಗಳೂರು: ಸಹೋದ್ಯೋಗಿ ‌ಯುವತಿಯನ್ನು ಮನೆಗೆ ಡ್ರಾಪ್ ಮಾಡುವ‌ ವೇಳೆ ಬೈಕ್ ಅಡ್ಡಗಟ್ಟಿ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ‌ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಹೊಸೂರು ರಸ್ತೆಯ ಡೇರಿ ವೃತ್ತದ ಬಳಿ ಶನಿವಾರ ರಾತ್ರಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದರನ್ವಯ‌ ದೂರು‌ ದಾಖಲಿಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.
ಬ್ಯಾಂಕ್​ವೊಂದರ ನೌಕರರಾದ ಮಹೇಶ್​ ತಮ್ಮ ಸಹೋದ್ಯೋಗಿ ಮುಸ್ಲಿಂ ಮಹಿಳೆಯೊಂದಿಗೆ ರಾತ್ರಿ‌ ಕೆಲಸ‌ ಮುಗಿಸಿ ಮನೆಗೆ ಹೊರಟಿದ್ದರು. ಅವರನ್ನು‌ ಹಿಂಬಾಲಿಸಿದ್ದ ಗುಂಪು, ಬೈಕ್‌ ಅಡ್ಡಗಟ್ಟಿ ಗಲಾಟೆ ಮಾಡಿತ್ತು ಎಂದು ಪೊಲೀಸ್ ತಿಳಿಸಿದ್ದಾರೆ.
ನಮ್ಮ ಧರ್ಮದ ಯುವತಿಯನ್ನು ಬೈಕ್‌ನಲ್ಲಿ ಏಕೆ‌ ಕರೆದೊಯ್ಯುತ್ತಿದ್ದಿಯಾ ಎಂದು ಗುಂಪು‌ ಪ್ರಶ್ನಿಸಿತ್ತು. ನಾವಿಬ್ಬರು ಸಹೋದ್ಯೋಗಿಗಳು, ಹಲವು ಬಾರಿ ಬೈಕ್‌ನಲ್ಲಿ‌ ಹೋಗುತ್ತೇವೆ ಎಂದು ಯುವತಿ ಹಾಗೂ ಯುವಕ‌ ಹೇಳಿದ್ದರು. ಯುವತಿ ಜೊತೆಯೂ ವಾದ ಮಾಡಿದ್ದ ಆರೋಪಿಗಳು, ಕುಟುಂಬದವರ‌ ಮೊಬೈಲ್ ನಂಬರ್ ಪಡೆದು ಅವರ ಜೊತೆಯೂ‌ ಕೆಟ್ಟದಾಗಿ ‌ಮಾತನಾಡಿದ್ದರು. ಯುವಕನ ಮೇಲೆಯೂ‌ ಹಲ್ಲೆ‌ ಮಾಡಿದ್ದರು.
ಯುವತಿಯನ್ನು ಬೈಕ್‌ನಿಂದ‌ ಇಳಿಸಿ ಆಟೋದಲ್ಲಿ‌ ಮನೆಗೆ ಕಳುಹಿಸಿದ್ದ ಆರೋಪಿಗಳು, ಯುವತಿ ಜೊತೆ ಇನ್ನೊಮ್ಮೆ ಬೈಕ್‌ನಲ್ಲಿ ಹೋಗದಂತೆ ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಮೃತ-ಸ್ಥಳ ಮಹಜರು ವೇಳೆ ಹಲವು ಸಾಕ್ಷ್ಯಗಳು ಪತ್ತೆ