Select Your Language

Notifications

webdunia
webdunia
webdunia
webdunia

ನಗರದ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ

Fire in a city factory
bangalore , ಭಾನುವಾರ, 19 ಸೆಪ್ಟಂಬರ್ 2021 (20:51 IST)
ಬೆಂಗಳೂರು: ನಗರದ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸೊಳ್ಳೆ ಪರದೆ ತಯಾರಿಸುವ ಫ್ಯಾಕ್ಟರಿಯೊಂದರಲ್ಲಿ ದುರ್ಘಟನೆ ಸಂಭವಿಸಿದೆ.
ಕಾವೇರಿಪುರದ ನಂಜಪ್ಪ ಲೇಔಟ್‌ನಲ್ಲಿರುವ ಫ್ಯಾಕ್ಟರಿಯಲ್ಲಿ ದುರ್ಘಟನೆ ಸಂಭವಿಸಿದ್ದು, 14 ಲಕ್ಷ ಮೌಲ್ಯದಷ್ಟು ವಸ್ತುಗಳು ಸುಟ್ಟುಭಸ್ಮವಾಗಿದೆ ಎಂದು ಶಂಕಿಸಲಾಗಿದೆ.
ಶಾರ್ಟ್‌ಸರ್ಕ್ಯೂಟ್‌ನಿಂದ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅವಘಡದಲ್ಲಿ ಪ್ಯಾಕ್ಟರಿಯಲ್ಲಿದ 15 ಮಗ್ಗದ ಯಂತ್ರಗಳು, ಸುಮಾರು 2 ಸಾವಿರ ಕೆಜಿ ಮೊನೊ ಫೀಲಾಮೆಂಟ್ ಯಾರ್ನ್, ರೆಡಿ ಸೊಳ್ಳೆ ಪರದೆಯ 150 ಪೀಸ್ ಬೆಂಕಿಗಾಹುತಿಯಾಗಿದೆ.
ಹೇಮಾದ್ರಿ ನಾಯ್ಡು ಎಂಬುವವರಿಗೆ ಫ್ಯಾಕ್ಟರಿ ಸೇರಿದ್ದು, ಅಂದಾಜು ಸುಮಾರು 14 ಲಕ್ಷ ನಷ್ಟವಾಗಿರುವ ಸಾಧ್ಯತೆಯನ್ನು ಶಂಕಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಗಾಂಡ ಪ್ರಜೆಗಳು ಅಟ್ಟಹಾಸ ಮೆರೆದಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ