Publish Date: Sun, 27 Sep 2026 (16:15 IST)
Updated Date: Sun, 27 Sep 2026 (16:20 IST)
ಶಿವಮೊಗ್ಗ: ಜನಿಸಿದ ಎರಡೇ ದಿನಕ್ಕೆ ನಾಲ್ಕು ಸಿಂಹದ ಮರಿಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಿವಮೊಗ್ಗ ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಮೃಗಾಲಯದಲ್ಲಿ 5 ವರ್ಷದ ಏಷ್ಯಾಟಿಕ್ ಸಿಂಹ ‘ಸಾರಾ’ ಜನ್ಮ ನೀಡಿದ್ದ 4 ಮರಿಗಳು ಸಾವನ್ನಪ್ಪಿದೆ.
ಸೆ.16 ರಂದು 4 ಮರಿಗಳಿಗೆ ಸಿಂಹಿಣಿ ‘ಸಾರಾ’ ಜನ್ಮ ನೀಡಿತ್ತು. ಜನಿಸಿದ ಎರಡು ದಿನದಲ್ಲೇ ನಾಲ್ಕೂ ಮರಿಗಳು ಮೃತಪಟ್ಟಿದ್ದು, ಆಘಾತಕಾರಿಯಾಗಿದೆ.
ಸಿಂಹಿಣಿ ಸಾರಾ ತಾಯ್ತನದ ಕೊರತೆಯಿಂದ ಮರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ