Publish Date: Sat, 26 Sep 2026 (19:42 IST)
Updated Date: Sat, 26 Sep 2026 (19:44 IST)
ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತಿದೆ. ಈ ಸೋಲಿಗೆ ನಾನು ಕಾರಣ ಅಲ್ಲ ಎಂದು ಸಾಬೀತು ಮಾಡಲು ರಾಹುಲ್ ಗಾಂಧಿ ಅವರು ನಾಟಕಗಳನ್ನು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಇಂದು ನಡೆದ ಬಿಜೆಪಿ- ಜೆಡಿಎಸ್ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಅಪ್ರಬುದ್ಧ ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆಯೇ ಪ್ರಶ್ನೆ ಆಗುತ್ತಿದೆ. ಇವರ ಅಪ್ರಬುದ್ಧತೆ ಮತ್ತು ಮೂರ್ಖತನದಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ಜೀವ ಕೊಡಲು ಎಸ್‍ಐಆರ್ ನಂತರ ಚಿಲ್ಲರೆ ಕಾರಣಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಾರೆ ಎಂದು ದೂರಿದರು. ದೇಶದಲ್ಲಿ ಅರಾಜಕತೆ ನಿರ್ಮಿಸುವ ಸಂಚನ್ನು ಕಾಂಗ್ರೆಸ್ ಮಾಡುತ್ತಿದೆ. ಸೋಲಿನಿಂದ ದೃತಿಗೆಟ್ಟಿರುವ ರಾಹುಲ್ ಹತಾಶರಾಗಿ ಕೇಂದ್ರ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇರಳದಲ್ಲಿ ಗೆÀದ್ದರೆ ಎಸ್‍ಐಆರ್ ಸರಿ. ಸೋತರೆ ಸರಿ ಅಲ್ಲ ಎಂದು ರಾಹುಲ್ ವಾದಿಸುತ್ತಾರೆ. ಕೇರಳದಲ್ಲಿ ಎಸ್‍ಐಆರ್ ನಂತರ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹಾಗಾದರೆ ಕೇರಳದಲ್ಲಿ ಎಸ್‍ಐಆರ್ ಬೆಂಬಲಿಸಿದ ಕಾಂಗ್ರೆಸ್ ನಾಯಕರನ್ನು ರಾಹುಲ್ ಗಾಂಧಿ ಹೊರಗೆ ಹಾಕುವರೇ ಎಂದು ಪ್ರಶ್ನೆ ಮಾಡಿದರು.
ಮಾಧ್ಯಮಗ¼ಲ್ಲಿ ಬಂದಿರುವಂತೆ ಎಸ್‍ಐಆರ್ ಸಂಬಂಧ ಚುನಾವಣಾ ಆಯೋಗದಲ್ಲಿ ಏಕಪಕ್ಷೀಯ ನಡೆ ಆಗಿಲ್ಲ. ಹಾಗೆ ಮಾಡಲು ಅವಕಾಶವೂ ಇಲ್ಲ. ಏಕೆಂದರೆ ಸುಪ್ರೀಂಕೋರ್ಟ್ ನಿರ್ದೇಶನವೇ ಇದೆ. ಎಲ್ಲವೂ ಗೊತ್ತಿದ್ದು ಸಹಿತ ರಾಹುಲ್ ಗಾಂಧಿ ಇಂತಹವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಾರೆ. ಅವರು ಸೋತಿದ್ದಾರೆ. ಸೋಲಿನ ಹತಾಶೆಯ ಅವರಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಪ್ರಮಾಣ ಮಾಡಲಿ: ಸಿದ್ದರಾಮಯ್ಯ ಅವರನ್ನು ವಜಾ ಮಾಡಿದಂತೆ ರಾಹುಲ್ ಗಾಂಧಿ ಅವರನ್ನು ವಜಾ ಮಾಡಲು ಆಗುವುದಿಲ್ಲ. ರಾಹುಲ್ ಗಾಂಧಿ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ವಾನಿರ್ಂಗ್ ಕೊಟ್ಟಿದ್ದಾರೆ. ಹಾಗೆ ಹೇಳಿಲ್ಲ ಎಂದು ಸಿದ್ದರಾಮಯ್ಯ ಅವರು ಪ್ರಮಾಣ ಮಾಡಿ ಹೇಳಲಿ ಎಂದರು
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ