Daily Horoscope

Select Your Language

Notifications

webdunia
webdunia
webdunia
webdunia

ಭಾರತ ದೇಶ ಇವರ ಅಪ್ಪನ ಮನೆ ಆಸ್ತಿಯೇ: ಬಿಕೆ ಹರಿಪ್ರಸಾದ್ ಕಿಡಿ

KPCC President BK Hariprasadh
ಬೆಂಗಳೂರು: ಹೈದರಾಬಾದ್‌ನಲ್ಲಿ ವೆಮುಲ ಎಂಬ ಎಸ್ ಸಿ ಹುಡುಗ ಸ್ನಾತಕೋತ್ತರ ಪದವಿ ಮಾಡುವಾಗ ಅಸ್ಪೃಷ್ಯತೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಂತಹ ನೂರಾರು ಘಟನೆಗಳು ನಡೆದಾಗ ನೊಂದವರಿಗೆ ನಿಮ್ಮ ಜತೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿದವರು ರಾಹುಲ್ ಗಾಂಧಿ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದರು. 

ಭಾರತ ಜೋಡೋ 5ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಬಿ ಕೆ ಹರಿಪ್ರಸಾದ್ ಅವರ ಮಾತನಾಡಿದರು. 

ಭಾರತ ಜೋಡೋ ಯಾತ್ರೆ ಮಾಡಿದ ಹಿಂದಿನ ಉದ್ದೇಶವನ್ನು ನಾವು ತಿಳಿಯಬೇಕು. ದೇಶದಲ್ಲಿ ಜಾತಿ, ಧರ್ಮಗಳ ವೈಷಮ್ಯದಿಂದ
ಹತ್ಯೆ, ದಲಿತರ ಮೇಲೆ ಹಲ್ಲೆಯಾಗುತ್ತಿತ್ತು. ದನದ ಮಾಂಸ ಹೊಂದಿದ್ದಾರೆ ಎಂದು ಹಲ್ಲೆ ಮಾಡುತ್ತಿದ್ದರು. ಈ ರೀತಿ ಬಿಜೆಪಿಯವರು ಹಿಂಸೆಯ ವಾತಾವರಣ ಸೃಷ್ಟಿಸಿದಾಗ, ಅವರಿಗೆ ಉತ್ತರ ಕೊಡುವವರು ಯಾರೂ ಇರುವುದಿಲ್ಲ. ದ್ವೇಷದ ಜ್ವಾಲೆ ಅಂತಾ ಬಂದರೆ ಅವರ ಕಣ್ಣಿಗೆ ಯಾರೂ ಕಾಣುವುದಿಲ್ಲ. 

ಗುಜರಾತಿನಲ್ಲಿ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮಗುವಿನ ಮುಂದೆ ತಾಯಿಯ ಅತ್ಯಾಚಾರ ಮಾಡುತ್ತಾರೆ. ತಾಯಿ ಎದುರು 3 ವರ್ಷದ ಮಗು ಹತ್ಯೆ ಮಾಡುತ್ತಾರೆ. ಆ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ನಲ್ಲಿ ನಡೆಸಿದಾಗ 11 ಜನರಿಗೆ ಜೀವಾವಧಿ ಶಿಕ್ಷೆ ಆಗುತ್ತದೆ. ನಂತರ ಬಿಜೆಪಿಯವರು ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸುತ್ತಾರೆ. ಜೈಲಿಂದ ಹೊರಬಂದ ಇತಹ ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕಿ ಸಿಹಿ ಹಂಚುತ್ತಾರೆ. ಸಮಾಜ ಇಷ್ಟು ಕುಸಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. 

ಹೈದರಾಬಾದ್ ನಲ್ಲಿ ವೆಮುಲ ಎಂಬ ಎಸ್ ಸಿ ಹುಡುಗ ಸ್ನಾತಕೋತ್ತರ ಪದವಿ ಮಾಡುವಾಗ ಅಸ್ಪೃಷ್ಯತೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆತನ ತಾಯಿಯ ಕಣ್ಣೀರು ಒರೆಸಲು ರಾಹುಲ್ ಗಾಂಧಿ ಹೋಗುತ್ತಾರೆ. ಇಂತಹ ನೂರಾರು ಘಟನೆ ಬಿಜೆಪಿ ಬಂದ ನಂತರ ನಡೆದವು. ಇದರ ವಿರುದ್ಧ ಯಾರೂ ಧ್ವನಿ ಎತ್ತಲಿಲ್ಲ. ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ ಎಂದು ಆತ್ಮಸ್ಥೈರ್ಯ ತುಂಬಿದ್ದು ರಾಹುಲ್ ಗಾಂಧಿ ಮಾತ್ರ ಎಂದು ಹೇಳಿದರು. 

ರಾಹುಲ್ ಗಾಂಧಿ ಅವರಿಗೆ ಪಾದಯಾತ್ರೆ ಮಾಡಿ ರಾಜಕಾರಣ ಮಾಡುವ ಅಗತ್ಯವಿಲ್ಲ. ಕರ್ನಾಟಕದಲ್ಲಿ ಹಿಜಾಬ್, ಅಜಾನ್, ಹಲಾಲ್ ಗಲಾಟೆ, ಅಲ್ಪಸಂಖ್ಯಾತರ ಜತೆ ವ್ಯಾಪಾರ ಮಾಡಬೇಡಿ ಎಂದು ಈ ವೇಳೆ ಕರೆ ಕೊಟ್ಟರು. 

ಭಾರತ ದೇಶ ಇವರ ಅಪ್ಪನ ಮನೆ ಆಸ್ತಿಯೇ? ಬೇರೆ ಧರ್ಮದವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಹಾಗೂ ಬೆವರು ನೀಡಿದ್ದಾರೆ. ಪ್ರತಿಯೊಬ್ಬರಿಗೂ ಇಲ್ಲಿ ಹಕ್ಕಿದೆ. ದೇಶದ ಏಕತೆ, ಶಾಂತಿ  ಕಾಪಾಡಲು ಪಾದಯಾತ್ರೆ ಮಾಡುತ್ತಾರೆ. ಇದಕ್ಕಾಗಿ ಸಮಿತಿ ಮಾಡಿದ್ದು, ನನ್ನನ್ನು ಸಮನ್ವಕರನ್ನಾಗಿ ಮಾಡಿದರು. ಆಗ ರಾಹುಲ್ ಗಾಂಧಿ ಅವರು ದಿನಕ್ಕೆ 40 ಕಿ.ಮೀ ನಡೆಯಬೇಕು ಎಂದರು. ಅದಕ್ಕೆ ನಾನು ನೀವು ಬೇಕಾದರೆ 80 ಕಿ.ಮೀ ನಡೆಯುತ್ತೀರಿ. ನಾವು ಕರ್ನಾಟಕದಲ್ಲಿ ಮೇಕೆದಾಟು ಯಾತ್ರೆ ಮಾಡಿದ್ದೇವೆ. 20 ಕಿ.ಮೀ ನಡೆಯುವುದು ಕಷ್ಟ ಎಂದೆ. ನಂತರ 30 ಕಿ.ಮೀ.ಗೆ ಇಳಿಸಿದರು. ಆಗ ದಿಗ್ವಿಜಯ್ ಸಿಂಗ್ ಅವರು ನೀವು ಒಮ್ಮೆ ಪರಿಶೀಸಿ ಎಂದು ಹೇಳಿದಾಗ ರಾಹುಲ್ ಗಾಂಧಿ ಅವರು 20 ಕಿ.ಮೀಗೆ ಇಳಿಸಿದರು.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಾತ್ರ ಮಾಡಿಲ್ಲ, ಮಣಿಪುರದ ಇಂಪಾಲದಿಂದ ಮುಂಬೈವರೆಗೂ ಒಟ್ಟು 10 ಸಾವಿರ ಕಿ.ಮೀ ನಡೆದರು. ಆ ಮೂಲಕ ದೇಶದಲ್ಲಿ 10 ಸಾವಿರ ಕಿ.ಮೀ ನಡೆದರು. ಆಮೂಲಕ ಮಹಾತ್ಮ ಗಾಂಧಿ ಅವರ ದಂಡಿ ಯಾತ್ರೆ ಮಾಡಿದರು. ದಂಡಿಯಾತ್ರೆ 243 ಕಿ.ಮೀ ನಡೆಸಿದರು. ಬ್ರಿಟೀಷರು ಉಪ್ಪಿನ ಮೇಲೆ ತೆರಿಗೆ ಹಾಕಿದಾಗ ಅದನ್ನು ಖಂಡಿಸಿ ಈ ಯಾತ್ರೆ ಮಾಡಿದರು. ಆಗ ಬ್ರಿಟೀಷರಿಗೆ ನಡುಕ ಹುಟ್ಟಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿಸಿದ ಬಿಗಿಭದ್ರತೆ, ಹಗಲು, ರಾತ್ರಿ ನಿಗಾ, ಕಾರಣ ಏನ್‌ ಗೊತ್ತಾ