ಹರತಾಳು ಹಾಲಪ್ಪ ವಿರುದ್ಧದ ರೇಪ್ ಕೇಸ್ ತೀರ್ಪು ಇಂದು ಪ್ರಕಟ

Webdunia
ಮಂಗಳವಾರ, 8 ಆಗಸ್ಟ್ 2017 (09:53 IST)
ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರವೆಸಗಿದ ಆರೋಪ ೆದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧದ ಪ್ರಕರಣದ ತೀರ್ಪು ಇಂದು ಹೊರ ಬೀಳಲಿದೆ. ಶಿವಮೊಗ್ಗದ 2ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಲಿದೆ.7 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿರುವ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.

ಮಾಜಿ ಸಚಿವ ಹರತಾಳು ಹಾಲಪ್ಪ ಅವರು ವಿನೋಬನಗರ ಕಲ್ಲಹಳ್ಳಿಯಲ್ಲಿರುವ ಮನೆಯಲ್ಲಿ ಸ್ನೇಹಿತ ವೆಂಕಟೇಶಮೂರ್ತಿಯವರ ಪತ್ನಿ ಮೇಲೆ 2009ನೇ ನವೆಂಬರ್ 26ರಂದು ಅತ್ಯಾಚಾರ ಎಸಗಿದ್ದರೆಂದು ಆರೋಪಿಸಲಾಗಿದ್ದು, ಪ್ರಕರಣ 2010ನೇ ಮೇ 2ರಂದು ಬೆಳಕಿಗೆ ಬಂದಿತ್ತು. ಹೀಗಾಗಿ, ಹಾಲಪ್ಪ ಅವರು ತಮ್ಮ ಸಚಿವಗಿರಿಗೆ ರಾಜೀನಾಮೆ ನೀಡಿದ್ದರು.

ಅತ್ಯಾಚಾರ ಆರೋಪ ಮಾಡಿದ್ದ ವೆಂಕಟೇಶಮೂರ್ತಿ ಪತ್ನಿ  ಬೆಂಗಳೂರಲ್ಲಿ ಪೊಲೀಸ್ ಮಹಾನಿರ್ದೇಶಕರು, ಶಿವಮೊಗ್ಗದ ವಿನೋಬನಗರ ಠಾಣೆಗೆ ದೂರು ನೀಡಿದ್ದರು. ರಾಜ್ಯಾದ್ಯಂತ ಪ್ರಕರಣ ಭಾರೀ ಸದ್ದು ಮಾಡಿತ್ತು. ಬಳಿಕ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕರಣವನ್ನ ಸಿಐಡಿ ತನಿಖೆಗೆ ಒಪ್ಪಿಸಿದ್ದರು. ಪ್ರಕರಣದ ಬಗ್ಗೆ ಮಾರ್ಚ್ 30, 2011ರಂದು ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಜ್ಜಿಯ ಧೈರ್ಯವೇ ನನ್ನ ಶಕ್ತಿ: ಬಿಹಾರ ಚುನಾವಣೆ ನಂತರ ಫಸ್ಟ್ ಟೈಂ ಹೊರಗೆ ಬಂದ ರಾಹುಲ್ ಗಾಂಧಿ

ಮೋಸ ಮಾಡಿ ಗೆದ್ದ ಪ್ರಧಾನಿಗಳನ್ನು ನಾನು ಇದುವರೆಗೂ ನೋಡಿಲ್ಲ: ಮೋದಿಗೆ ಸಂತೋಷ್ ಲಾಡ್ ಟಾಂಗ್

ನಾಳೆಯೇ ನಿತೀಶ್‌ ಕುಮಾರ್‌ ಪ್ರಮಾಣವಚನ: ಡಿಸಿಎಂಗಳಾಗಿ ಸಾಮ್ರಾಟ್, ವಿಜಯ್‌ ಆಯ್ಕೆ ಸಾಧ್ಯತೆ

ಸಂಪುಟ ವಿಸ್ತರಣೆಯಲ್ಲೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ

ಡಿಸೆಂಬರ್‌ನಲ್ಲಿ ಮುಳ್ಳಯ್ಯನಗಿರಿಗೆ ಟ್ರಿಪ್ ಪ್ಲಾನ್ ಮಾಡಿದವರು ಈ ಸುದ್ದಿ ಓದಲೇ ಬೇಕು

ಮುಂದಿನ ಸುದ್ದಿ
Show comments