Publish Date: Sat, 29 Jul 2017 (13:51 IST)
Updated Date: Sat, 29 Jul 2017 (13:53 IST)
ಹೋಮ್‌ಗಾರ್ಡ್‌ನೊಂದಿಗೆ ಗೆಳೆತನ ಹೊಂದಿದ್ದ ಜಯನಗರ ಠಾಣೆಯ ಪೇದೆ ಮೋಹನ್, ಗೆಳೆತನದ ನೆಪದಲ್ಲಿ ಅವರ ಮನೆಗೆ ತೆರಳಿ ಆತನ ಪತ್ನಿ ಮತ್ತು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಬಂಧಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಹೆಡ್‌ಕಾನ್ಸ್‌ಟೇಬಲ್ ಮೋಹನ್, ಹೋಮ್‌ಗಾರ್ಡ್ ಮನೆಗೆ ಪದೇ ಪದೇ ತೆರಳಿ ಮನೆಯಲ್ಲಿದ್ದ ಆತನ ಪತ್ನಿ ಮತ್ತು ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಪ ವರಿಷ್ಠಾಧಿಕಾರಿ ಆರೋಪಿ ಮೋಹನ್‌ನ ವಿಚಾರಣೆಗೊಳಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೂರು ದಿನಗಳ ಹಿಂದೆ ಹೋಮ್‌ಗಾರ್ಡ್ ಪತ್ನಿ ಮತ್ತು ಪುತ್ರಿ ಹೆಡ್‌ಕಾನ್ಸ್‌ಡೇಬಲ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.