Webdunia - Bharat's app for daily news and videos

Install App

ಶಿಗ್ಗಾವಿ ಲೋಕಸಭೆ ಉಪ ಚುನಾವಣೆ: ಪುತ್ರನ ಸ್ಪರ್ಧೆ ಬಗ್ಗೆ ಬೊಮ್ಮಾಯಿ ಹೀಗಂದ್ರು

Sampriya
ಶನಿವಾರ, 19 ಅಕ್ಟೋಬರ್ 2024 (19:24 IST)
ನವದೆಹಲಿ: ಉಪ ಚುನಾವಣೆಯಲ್ಲಿ ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವ ಸಾಧಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬುಲಾವ್ ಮೇರೆಗೆ ದೆಹಲಿಗೆ ಬಂದಿದ್ದೇನೆ. ಅವರು, ಮಹಾರಾಷ್ಟ್ರ ಜಾರ್ಖಂಡ್ ಸಂಸದೀಯ ಮಂಡಳಿ ಸಭೆ ನಡೆಸಿ ಬಳಿಕ ನಮಗೆ ಸಮಯ ನೀಡುತ್ತಾರೆ. ಅವರ ಭೇಟಿ ಬಳಿಕ ಶಿಗ್ಗಾವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಶಿಗ್ಗಾವಿಯಲ್ಲಿ ಯಾರು ಗೆಲ್ಲುತ್ತಾರೆಂಬ ಆಧಾರದ ಮೇರೆಗೆ ಯಾರು ಅಭ್ಯರ್ಥಿ ಎಂದು ನಿರ್ಧರಿಸಲಾಗುತ್ತದೆ. ನಾಳೆಯ ಸಭೆಯಲ್ಲಿ ಎಲ್ಲವೂ ಚರ್ಚೆ ನಡೆಯುತ್ತದೆ. ಇನ್ನೂ ಶಿಗ್ಗಾವಿ, ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಮಾಡಲಿದ್ದೇವೆ ಎಂಧರು.

ಇನ್ನೂ ಶಿಗ್ಗಾವಿಯಲ್ಲಿ ಸ್ಥಳೀಯ ಮುಖಂಡರು ಭರತ್ ಬೊಮ್ಮಾಯಿಯವರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅಲ್ಲಿ ಇಷ್ಟು ವರ್ಷ ಉತ್ತಮ ಕೆಲಸ ಮಾಡಿರುವುದನ್ನು ನೋಡಿ ನನ್ನ ಮಗನ ಹೆಸರು ಹೇಳಿರಬಹುದು. ಆದರೆ ವೈಯಕ್ತಿಕ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ಬೇಡ ಅಂತ ಅಂತ ಹೇಳಿದ್ದೇನೆ. ಈ ಎಲ್ಲ ಬೆಳವಣಿಗೆ ಬಗ್ಗೆ ಜೆಪಿ ನಡ್ಡಾ ಜತೆಗೆ ಚರ್ಚೆಯಾಗಲಿದೆ ಎಂದು ಅವರು ಹೇಳಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments