Publish Date: Wed, 16 Jan 2019 (15:34 IST)
Updated Date: Wed, 16 Jan 2019 (15:36 IST)
ಸಿದ್ದಗಂಗಾ ಸ್ವಾಮೀಜಿಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಅಥವಾ ಏರುಪೇರು ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಡಾ. ಪರಮೇಶ್ ಹೇಳಿಕೆ ನೀಡಿದ್ದು, ರಾತ್ರಿಯಿಂದ ಮಠಕ್ಕೆ ಹೋಗುವಂತೆ ಸ್ವಾಮೀಜಿಗಳು ಸೂಚನೆ ನೀಡುತ್ತಿದ್ದರು. ನಾಳೆ ಅಥವಾ ನಾಡಿದ್ದು ಶಿಫ್ಟ್ ಮಾಡಬೇಕಂತ ಸಭೆ ನಡೆಸಿ ನಿರ್ಧಾರ ಮಾಡಿದ್ದೇವು. ನಿನ್ನೆ ಮಠದ ಹಿರಿಯರು ಹಾಗೂ ಎಸ್ಪಿ ಸೇರಿ ಸಭೆ ನಡೆಸಿದ್ದೇವು. ಆದರೆ ರಾತ್ರಿಯಿಂದ ಸ್ವಾಮೀಜಿಗಳು ಮಠಕ್ಕೆ ಹೋಗಬೇಕೆಂದು ಚಡಪಡಿಸುತ್ತಿದ್ದರು. ನಾವು ಈ ರೀತಿ ನಿರ್ಧಾರ ತೆಗೆದುಕೊಂಡು ಮಠಕ್ಕೆ ಶಿಫ್ಟ್ ಮಾಡಲಾಗಿದೆ ಎಂದರು.
ಸಿದ್ದಗಂಗಾ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆಯನ್ನೇ ಮುಂದುವರೆಸುತ್ತಿದ್ದೇವೆ ಎಂದ ಅವರು, ಮೊದಲು ಆಕ್ಸಿಜನ್ ಪೈಪ್ ಸೇರಿದ್ದಂತೆ ಕೆಲವು ನ್ಯೂನ್ಯತೆಗಳಿದ್ದವು. ಅವುಗಳನ್ನು ಸರಿಪಡಿಸಿಕೊಂಡು ಆಸ್ಪತ್ರೆಯ ರೀತಿ ಚಿಕಿತ್ಸೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಸೋಂಕು ಕಡಿಮೆಯಾಗಿದೆ. ನ್ಯೂಟ್ರಿಷನ್ ಚಿಕಿತ್ಸೆ ಮುಂದುವರಿಸುತ್ತೇವೆ ಎಂದರು.