Select Your Language

Notifications

webdunia
webdunia
webdunia
webdunia

ರಮೇಶ್ ಜಾರಕಿಹೊಳಿ- ಸೆಟ್ಟರ್ ರಹಸ್ಯ ಮಾತುಕತೆ

ರಮೇಶ್ ಜಾರಕಿಹೊಳಿ- ಸೆಟ್ಟರ್ ರಹಸ್ಯ ಮಾತುಕತೆ
hubali , ಭಾನುವಾರ, 8 ಆಗಸ್ಟ್ 2021 (21:47 IST)
ಹುಬ್ಬಳ್ಳಿ- ನಗರದ ಕೇಶ್ವಾಪುರದ ಬಾದಾಮಿನಗರದಲ್ಲಿ‌ನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶನಿವಾರ ಸಂಜೆ ಭೇಟಿ ನೀಡಿಗುಪ್ತ ಗುಪ್ತ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಸಂಪುಟದಿಂದ ದೂರ ಉಳಿಯುವ ಮೂಲಕ ಮಾಜಿ ಮುಖ್ಯಮಂತ್ರಿಗಳು ಶಾಸಕರಾದ ಜಗದೀಶ್ ಶೆಟ್ಟರ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆಯುತಿದ್ದು ಒಂದು ಕಡೆ ಜನತಾ ಪರಿಹಾರ ಹಿನ್ನೆಲೆಯಲ್ಲಿವುಳ್ಳವರು ಮುಖ್ಯಮಂತ್ರಿಯಾಗಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಂಪುಟದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿದ್ದು. ಇದರ ಜೊತೆಗೆ ಖಾತೆ ಹಂಚಿಕೆಯಲ್ಲಿಯೂ ಅಪಸ್ವರ ಕೇಳಿಬರುತ್ತಿದೆ‌. ಈ ಎಲ್ಲ ಬೆಳವಣಿಗೆ ನಡುವೆಯೂ ಯಡಿಯೂರಪ್ಪನವರ ಕೈ ಮೇಲಾಗಿರುವುದು ಸಹ ಇಷ್ಟಕ್ಕೆಲ್ಲಾ ಕಾರಣ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆ ಮಧ್ಯ ಕೈ ಮುಖಂಡ ಪ್ರಕಾಶ ಹುಕ್ಕೇರಿ ಅವರು ಸಹ ಇಂದು ಜಗದೀಶ್ ಶೆಟ್ಟರ್ ಅವರನ್ನೂ ಭೇಟಿಯಾಗಿದ್ದಾರೆ. ಆದರೆ ಅವರು ಯಾವದೂ ಕಾರ್ಯಕ್ರಮದ ಆಮಂತ್ರಣ ಪತ್ರ ನೀಡಲು ಬಂದಿದ್ದಾರೆ ಎನ್ನಲಾದರೂ ಸಹ ಕಳೆದ ಒಂದು ವಾರದಲ್ಲಿ ಮೂರನೇ ಭಾರಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
jagadhish shetar

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಪ್ರೋಪೆಸರ್ ಅರೆಸ್ಟ್