Select Your Language

Notifications

webdunia
webdunia
webdunia
webdunia

ವಿಷಾಹಾರಕ್ಕೆ ಕುರಿಗಳು ಬಲಿ

ವಿಷಾಹಾರಕ್ಕೆ ಕುರಿಗಳು ಬಲಿ
ಕಲಬುರಗಿ , ಮಂಗಳವಾರ, 30 ಅಕ್ಟೋಬರ್ 2018 (18:37 IST)
ವಿಷ ಆಹಾರ ಸೇವಿಸಿ 25 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಲಬುರ್ಗಿ ಹೊರವಲಯದ ಸರ್ಕಾರಿ ಉಗ್ರಾಣದ ಬಳಿ ವಿಷ ಆಹಾರ ಸೇವಿಸಿ 25 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಗ್ರಾಣದ ಪಕ್ಕದಲ್ಲಿ ಮೇಯಿಸುವ ವೇಳೆ ಮೇವು ತಿಂದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತದೆ.

ಸುರಪುರ ತಾಲೂಕಿನ ಅಮ್ಮಾಪುರ ನಿವಾಸಿ ರಾಯಪ್ಪ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಉಗ್ರಾಣದಲ್ಲಿ ಶೇಖರಿಸಿಟ್ಟ ದವಸ-ಧಾನ್ಯಗಳ ರಕ್ಷಣೆಗಾಗಿ ಬಳಸಿದ ವಿಷ ಪಸರಿಸಿ ಘಟನೆ ನಡೆದಿರಬಹುದು ಎನ್ನಲಾಗುತ್ತದೆ.

ಅಂದಾಜು  2.5 ಲಕ್ಷ ಮೌಲ್ಯದ ಕುರಿಗಳು ಸಾವನ್ನಪ್ಪಿವೆ. ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಂಚಾಯತ್ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ