Select Your Language

Notifications

webdunia
webdunia
webdunia
webdunia

ಸಿಎಂ ಮಮತಾ ಬ್ಯಾನರ್ಜಿ ಪಾದ ಮುಟ್ಟಿ ನಮಸ್ಕರಿಸಿದ ಶಾರುಕ್ ಖಾನ್

sharukh khan
ಕೋಲ್ಕತಾ , ಶುಕ್ರವಾರ, 3 ನವೆಂಬರ್ 2023 (19:14 IST)
ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಶಾರುಕ್ ಖಾನ್, ಸಿಎಂ ಬ್ಯಾನರ್ಜಿಯವರ ಕಾಲು ಮುಟ್ಟಿ ನಮಸ್ಕರಿಸಿದಾಗ ಅವರ ನಡುವಿನ ವಿಶೇಷ ಸಂಬಂಧ ನೆರೆದಿದ್ದ ಜನತೆಗೆ ಸ್ಪಷ್ಟವಾಗಿತ್ತು. ಸಹೋದರನಿಗೆ ಬೀಳ್ಕೋಡುವಂತೆ ದೀದಿ, ಶಾರುಕ್‌ರನ್ನು ನೋಡಿಕೊಂಡಿರುವುದು ನೆರೆದಿದ್ದವರಲ್ಲಿ ಸಂತಸದ ಸಂಭ್ರಮ ಕಂಡು ಬಂದಿತು.
 
ಕೋಲ್ಕತಾಗೆ ಆಗಮಿಸಿದ್ದ ಶಾರುಕ್‌ಗೆ, ಕಾರ್ಯಕ್ರಮ ಮುಗಿದ ನಂತರ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದು ಬೇರೆ ಯಾರು ಅಲ್ಲ. ಸ್ವತಃ ಸಿಎಂ ಬ್ಯಾನರ್ಜಿ. ಶಾರುಕ್ ಖಾನ್ ದೀದಿಯ ಸ್ಯಾಂಟ್ರೋ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ವಿಡಿಯೋ ವೈರಲ್ ಆಗಿದೆ.
 
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಮಧ್ಯ ಸಹೋದರಿ, ಸಹೋದರನ ಅನ್ಯೋನ್ಯವಾದ ಸಂಬಂಧವಿದೆ. ನಗರಕ್ಕೆ ಬಂದಾಗಲೆಲ್ಲಾ ಮಮತಾ ಬ್ಯಾನರ್ಜಿ(ದೀದಿ)ಯನ್ನು ಭೇಟಿ ಮಾಡುವ ಶಾರುಕ್‌ಗೆ ಕೋಲ್ಕತಾ ಎರಡನೇ ತವರುಮನೆಯಾಗಿ ಹೊರಹೊಮ್ಮಿದೆ.
 
ಪ್ರಪಂಚದಲ್ಲಿರುವ ಎಲ್ಲಾ ಐಷಾರಾಮಿ ಸೌಲಭ್ಯ ಹೊಂದಿರುವ ಶಾರುಕ್, ಒಂದು ಸಣ್ಣ ಕಾರಿನಲ್ಲಿ ದೀದಿಯೊಂದಿಗೆ ಪ್ರಯಾಣಿಸಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.
 
ಒಂದು ಸಣ್ಣ ಕಾರಿನಲ್ಲಿ ಎಸ್‌ಆರ್‌ಕೆ ಸವಾರಿ ಮಾಡಿ ಎಷ್ಟು ಕಾಲವಾಗಿದೆಯೋ ಎನ್ನುವಂತೆ ವಿಮಾನ ನಿಲ್ದಾಣದಲ್ಲಿದ್ದ ಜನರು  ಆಸಕ್ತಿಯನ್ನು ತೋರುತ್ತಿದ್ದರು. ಆದರೆ, ಮೌನವಾಗಿ ಮುಂದೆ ಸಾಗಿದ ಶಾರುಕ್ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದಿರಲು ನಿರ್ಧರಿಸಿದ್ದರು ಎನ್ನಲಾಗಿದೆ.
 
ಪ್ರಸಕ್ತ ವರ್ಷದಲ್ಲಿ ನಡೆದ ರಾಖಿ ಹಬ್ಬದಂದು ಟ್ವೀಟ್ ಮಾಡಿದ ಶಾರುಕ್, ಪ್ರತಿ ವರ್ಷ ರಾಖಿ ಹಬ್ಬದಂದು ದೀದಿಯ ಆಶೀರ್ವಾದಕ್ಕಾಗಿ ಕಾಯುತ್ತೇನೆ ಎಂದು ತಿಳಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಏನು ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ-ಜಿ.ಪರಮೇಶ್ವರ್