Select Your Language

Notifications

webdunia
webdunia
webdunia
webdunia

`ನನ್ನ ಜೊತೆ ಅಡ್ಜಸ್ಟ್ ಆಗದಿದ್ದರೆ ಇಂಟರ್ನಲ್ ಮಾರ್ಕ್ ಕಟ್’

`ನನ್ನ ಜೊತೆ ಅಡ್ಜಸ್ಟ್ ಆಗದಿದ್ದರೆ ಇಂಟರ್ನಲ್ ಮಾರ್ಕ್ ಕಟ್’
ಧಾರವಾಡ , ಭಾನುವಾರ, 6 ಆಗಸ್ಟ್ 2017 (14:13 IST)
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಾಧ್ಯಾಪಕನೊಬ್ಬ ನನ್ನ ಜೊತೆ ಅಡ್ಜೆಸ್ಟ್ ಆಗದಿದ್ದರೆ ಇಂಟರ್ನಲ್ ಮಾರ್ಕ್ ಕೊಡುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ವಿದ್ಯಾರ್ಥಿನಿ ವಿಸಿಗೆ ದೂರು ನೀಡಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಪರಾಧಶಾಸ್ತ್ರದ 3ನೇ ಸೆಮಿಸ್ಟರ್
ವಿದ್ಯಾರ್ಥಿನಿಗೆ ಪ್ರಾಧ್ಯಾಪಕ ಈ ರೀತಿ ಬ್ಲಾಕ್ ಮೇಲೆ ಮಾಡಿದ್ದು, ಸಹಕರಿಸದಿದ್ದರೆ ಇಂಟರ್ನಲ್ ಮಾರ್ಕ್ಸ್ ಕೊಡುವುದಿಲ್ಲ. ಕ್ಯಾರೆಕ್ಟರ್ ಪ್ರಮಾಣಪತ್ರದಲ್ಲಿ ಕ್ಯಾರೆಕ್ಟರ್ ಲೆಸ್ ಎಂದು ನಮೂದಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿರುವುದಾಗಿ ದೂರಿನಲ್ಲಿ ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ಆರೋಪಿತ ಪ್ರಾಧ್ಯಾಪಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಳೆ ಕುಲಪತಿಗಳೇ ಸ್ಪಷ್ಟೀಕರಣ ನೀಡುವ ಸಾಧ್ಯತೆ
ಇದೆ ಎನ್ನಲಾಗಿದೆ. ವಿದ್ಯಾ ದೇಗುಲದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ ಬಂಧನ