Select Your Language

Notifications

webdunia
webdunia
webdunia
webdunia

ಚೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ ಬಂಧನ

ಚೋಟಾ ರಾಜನ್
ಮಂಗಳೂರು , ಭಾನುವಾರ, 6 ಆಗಸ್ಟ್ 2017 (13:12 IST)
ಚೋಟಾ ರಾಜನ್ ಸಹಚರ  ಡಬಲ್ ಮರ್ಡರ್ ಕೇಸ್`ನಲ್ಲಿ ಬೇಕಾಗಿದ್ದ ವಿನೇಶ್ ಶೆಟ್ಟಿ ಎಂಬಾತನನ್ನ ಮಂಗಳೂರಿನ ಕೋಣಾಜೆ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ಉಡುಪಿ ಮೂಲದ ವಿನೇಶ್ ಶೆಟ್ಟಿ ಡಬಲ್ ಮರ್ಡರ್ ಪ್ರಕರಣದ ಆರೋಪಿಯಾಗಿದ್ದು ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಕಲ್ಲು ಕ್ವಾರಿ ಮಾಲೀಕ ವೇಣುಗೋಪಾಲ್ ನಾಯಕ್ ಮತ್ತು ಸಂತೋಷ್ ಕೊಲೆ ಪ್ರಕರಣದಲ್ಲಿ ವಿನೇಶ್ ಶೆಟ್ಟಿ ಸೇರಿ 6 ಮಂದಿಯನ್ನ ಬಂಧಿಸಿದ್ದರು. 2015ರವರೆಗೆ ವಿಚಾರಣೆಗೆ ಹಾಜರಾಗುತ್ತಿದ್ದ ವಿನಯ್ ಶೆಟ್ಟಿ ಬಳಿಕ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಮಂಗಳೂರು, ದಾವಣಗೆರೆ, ಪುಣೆ, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಈತನ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ, ಹವಾಲಾ, ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳಿವೆ ಎನ್ನಲಾಗಿದೆ. ಹೀಗಾಗಿ, ವಿನೇಶ್ ಶೆಟ್ಟಿ ಬಂಧನ ಪೊಲೀಸರ ಬಹುದೊಡ್ಡ ಬೇಟೆಯಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

‘ರಾಜ್ಯ ಸರ್ಕಾರದ ಅಧೀನದಲ್ಲಿ ಐಟಿ ಇದ್ದಿದ್ದರೆ ಡಿಕೆಶಿಗೆ ಕ್ಲೀನ್ ಚಿಟ್ ಸಿಗ್ತಿತ್ತು’