Select Your Language

Notifications

webdunia
webdunia
webdunia
webdunia

ಯುವಕನ ಮೇಲೆ ಲೈಂಗಿಕ‌ ದೌರ್ಜನ್ಯ: ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಬಂಧನ

Dr. Suraj Revanna

Sampriya

ಬೆಂಗಳೂರು: , ಭಾನುವಾರ, 23 ಜೂನ್ 2024 (13:02 IST)
ಬೆಂಗಳೂರು: ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿದ್ದಾರೆ.

ತನಿಖಾಧಿಕಾರಿಯಾಗಿರುವ ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕು‌ಮಾರ್, ಸೂರಜ್ ಅವರನ್ನು ಬಂಧಿಸಿದ್ದು, ಇಂದೇ ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಾಧ್ಯತೆ ಇದೆ‌.

ಶನಿವಾರ ರಾತ್ರಿ 7.30 ರ ಸಮಯದಲ್ಲಿ ಸಿಇಎನ್ ಪೊಲೀಸ್ ಠಾಣೆಗೆ ಡಾ.ಸೂರಜ್‌ರೇವಣ್ಣ ಅವರನ್ನು ಕರೆ ತಂದಿದ್ದ ಪೊಲೀಸರು ಭಾನುವಾರ ಮುಂಜಾನೆವರೆಗೂ ವಿಚಾರಣೆ ನಡೆಸಿದರು. ಸಂತ್ರಸ್ತ ನೀಡಿರುವ ದೂರು ಹಾಗೂ ಸೂರಜ್ ಆಪ್ತ ನೀಡಿರುವ ದೂರುಗಳ ಪ್ರತ್ಯೇಕ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ.

ರಾತ್ರಿ ಪೊಲೀಸ್ ಠಾಣೆಗೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿ ತೆರಳಿದ್ದರು. ಮತ್ತೊಂದೆಡೆ ಸಂತ್ರಸ್ತನನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದ ಪೊಲೀಸರು ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಹಿತದ ಹಿನ್ನೆಲೆಯಲ್ಲೇ ಬಿಜೆಪಿ ರಾಜಕಾರಣ: ಸಿ.ಟಿ.ರವಿ