Select Your Language

Notifications

webdunia
webdunia
webdunia
webdunia

ಶೀಘ್ರದಲ್ಲಿಯೇ ಬರಲಿದೆ ಲೈಂಗಿಕ ಸುಖ ಕೊಡುವ ರೊಬೊಟ್...!

Sex robot
ನವದೆಹಲಿ , ಸೋಮವಾರ, 26 ಡಿಸೆಂಬರ್ 2016 (15:56 IST)
ಪ್ರಪಂಚ ಆಧುನಿಕವಾಗಿ, ಅದರಲ್ಲೂ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದೆ. ಈ ನಡುವೆಯೇ ಮನುಷ್ಯನ ಲೈಂಗಿಕ ಬಯಕೆ ತೀರಿಸುವ ಸಾಕಷ್ಟು ಟಾಯ್ ಗಳು ಮಾರುಕಟ್ಟೆಗೆ ಬಂದಿದ್ದವು. ಅವುಗಳ ಜೊತೆಗೆ ಸೆಕ್ಸ್ ಬೊಂಬೆ ಕೂಡಾ ಲಗ್ಗೆ ಇಟ್ಟಿದ್ದವು. ಇವೆಲ್ಲ ಅಸಹಜ ಸೆಕ್ಸ್ ಫೀಲ್ ನೀಡುತ್ತಿದ್ದವು ಎನ್ನುವುದು ಕೆಲವರ ಅನಿಸಿಕೆಯಾಗಿತ್ತು. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಹಜ ಫೀಲ್ ನೀಡುವ ಸೆಕ್ಸ್ ರೊಬೊಸ್ ಮಾರುಕಟ್ಟೆಗೆ ಇಷ್ಟರಲ್ಲಿಯೇ ಲಗ್ಗೆ ಇಡಲಿವೆ.
ಸ್ವಲ್ಪ ವೇಟ್.. ವೇಟ್... ಒಮ್ಮೆಲೆ ಅಂತರ್ಜಾಲ ತಡಕಾಡಬೇಡಿ. ಇವನ್ನೆಲ್ಲ ಕೂಲಾಗಿ ಒಮ್ಮೆ ಓದಿ. ಲೈಂಗಿಕ ರೊಬೊಟ್ ಗಳಿಗೆ ದೈಹಿಕ ಮಿತಿ ಇರುವುದಿಲ್ಲ. ಅವುಗಳ ಜೊತೆ ಯಾವುದೇ ಸಮಯದಲ್ಕಿ ಲೈಂಗಿಕ ಕ್ರೀಡೆಯಲ್ಲಿ ತೊಡಗುವುದರಿಂದ ನಿಕಟ ಅನುಭವ ನೀಡಲಾರವು ಎನ್ನುವುದು ಬಹುತೇಕರ ಅನಿಸಿಕೆಯಾಗಿತ್ತು. ಈಗ ಆ ಸಹಜತೆಯನ್ನು ಅಬುಭವಿಸುವ ಸಾಮರ್ಥ್ಯವಿರುವ ರೊಬೊಟ್ ಬಂದಿದೆ. ಪರಿಪೂರ್ಣವಾಗಿ ಕಾರ್ಯನಿರ್ವಹಿಸುವ, ಜನನಾಂಗ ಹೊಂದಿರುವ ವಾಸ್ತವಿಕ ರೊಬೋಟ್ ಗಳು ಸಿದ್ಧವಾಗುತ್ತಿವೆ. 2017ರ ವೇಳೆ ವಿಶ್ವ ಮಾರುಕಟ್ಟೆಗೆ ಲಗ್ಗೆ ಇಡುವ ಈ ರೊಬೋಟ್ ಗಳು, ತಯಾರಾಗುತ್ತಿರುವುದು ಕ್ಯಾಲಿಫೋರ್ನಿಯಾದ ಎಬಿಸ್ ಕ್ರಿಯೇಷನ್ ಸಂಸ್ಥೆಯಲ್ಲಿ.
 
ಪಯರುಷ ಹಾಗೂ ಸ್ತ್ರೀಯ ನೈಜ ದೇಹ ಸೌಂದರ್ಯ ಹಾಗೂ ಸಂಪೂರ್ಣ ಚಲನಶೀಲವಾದ ಮತ್ತು ಸಂಚಲನೆಯನ್ನು ಈ ರೊಬೊಟ್ ಹೊಂದಿದೆ. ಈ ಹೈಪರ್ ರಿಯಾಲಿಸ್ಟಿಕ್ ರೊಬೊಟ್ ಗೆ ರಿಯಲ್ ಡಾಲ್ ಎಂದು ಹೆಸರಿಡಲಾಗಿದೆ. ಇದರಲ್ಲಿ ಸೆನ್ಸರ್ ಅಳವಡಿಸಿರುವುದರಿಂದ, ಮಾನವನ ಸ್ಪರ್ಶಕ್ಕೆ ಪ್ರತಿಸ್ಪಂದಿಸಿ, ಅದಕ್ಕೆ ಸಮನಾದ ಉಷ್ಣಾಂಷವನ್ನು ರೊಬೊಟ್ ಗೆ ಒದಗಿಸುತ್ತದೆ.
 
ಮುಂದಿನ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ರಿಯಲ್ ಡಾಲ್ ಬೆಲೆ 9,75,591 ರೂ. ಸರಿ ಸುಮಾರು ಹತ್ತು ಲಕ್ಷ ರೂ. ಅಂದಾಯಿತು. ಈ ಮೋಜಿನ ಡಾಲ್ ಸಾಮಾನ್ಯನಿಗೆ ಎಟುಕುವುದಂತೂ ಅಲ್ಲ. ದುಡ್ಡಿದ್ದವರು ಮಾತ್ರ ಅದರ ಜೊತೆ ಮೋಜಿನಾಟ ಆಡಬಹುದು ಎನ್ನುವುದು ಸಾಮಾನ್ಯನ ಖೇದದ ಮಾತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಮಣ್ಣು ಮುಕ್ಕಿಸಲು ಮತ್ತೊಂದು ಸರ್ಜಿಕಲ್ ಸ್ಟ್ರೈಕ್‌ಗೆ ಸೇನೆ ಸಿದ್ದತೆ